ಜಿಲ್ಲೆ

ಕೆಮಿಕಲ್​ ಸಂಪ್​ ಸ್ವಚ್ಛತೆಗಿಳಿದಿದ್ದ ಇಬ್ಬರು ಸಾವು

ಮತ್ತಿಬ್ಬರ ಸ್ಥಿತಿ ಗಂಭೀರ, ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ತುಮಕೂರು: ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಲೋರಸ್​ ಬಯೋ ಫ್ಯಾಕ್ಟರಿ ಸಂಪ್​ ಕ್ಲೀನಿಂಗ್​ಗೆ ಇಳಿದಿದ್ದ ಇಬ್ಬರು ಕೂಲಿ ಕಾರ್ಮಿಕರು ಬುಧವಾರ ಉಸಿರುಗಟ್ಟಿ ಮೃತಪಟ್ಟಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದಾರೆ. ಕೂಲಿಗಾಗಿ ಬಂದಿದ್ದ ಶಿರಾ ತಾಲೂಕು ತರೂರು ಗ್ರಾಮದ ವೆಂಕಟೇಶ್​(32), ಮಧುಗಿರಿ ತಾಲೂಕಿನ ಮಾಗೋಡು ಗ್ರಾಮದ ಪ್ರತಾಪ್​(23) ಮೃತರು. ಯುವರಾಜ್​, ಕುಮಾರ್​ ಎಂಬುವವರು ಆನಾರೋಗ್ಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿರಾ ತಾಲೂಕಿನ ತರೂರು ಗ್ರಾಮದ ಮಂಜುನಾಥ್​ ಎಂಬುವವರು ಲೋರಸ್​ ಬಯೋ ಫ್ಯಾಕ್ಟರಿಯಲ್ಲಿ ಸಂಪ್​ ಕ್ಲಿನಿಂಗ್​ ಕೆಲಸಕ್ಕೆ 4 ಜನ ಕಾರ್ಮಿಕರನ್ನ ಕರೆತಂದಿದ್ದ ಎನ್ನಲಾಗಿದ್ದು, ತರೂರು ಗ್ರಾಮದಿಂದ ವೆಂಕಟೇಶ್​, ಯುವರಾಜ್​, ಕುಮಾರ್​ ಸಂಪ್​ ಕ್ಲಿನಿಂಗ್​ ಕೆಲಸಕ್ಕೆ ಬಂದಿದ್ದರು. ಆರಂಭದಲ್ಲಿ ಸಂಪ್​ಗೆ ಇಳಿದ ಮಂಜುನಾಥ್​ ಉಸಿರುಗಟ್ಟಿದ್ದು, ಅವರನ್ನು ರಸಲು ಫ್ಯಾಕ್ಟರಿ ಸೆಕ್ಯುರಿಟಿ ಪ್ರತಾಪ್​, ವೆಂಕಟೇಶ್​ ಹಾಗೂ ಯುವರಾಜ್​ ಸಂಪ್​ಗೆ ಇಳಿದಾಗ ಅವಡ ಸಂಭವಿಸಿದೆ. ಮಂಜುನಾಥ್​, ಯುವರಾಜ್​ ಸ್ಥಿತಿ ಗಂಭೀರವಾಗಿದ್ದು, ತುಮಕೂರು ಸಿದ್ಧಗಂಗಾ ಆಸ್ಪತ್ರೆ ಐಸಿಯು ಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತದೇಹಗಳನ್ನು ಜಿಲ್ಲಾಸ್ಪತ್ರೆ ಶಾವಾಗಾರದಲ್ಲಿಡಲಾಗಿದ್ದು, ಕಾರ್ಮಿಕರ ಸಾವಿಗೆ ಫ್ಯಾಕ್ಟರಿ ಮಾಲೀಕನ ರ್ನಿಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಕೋರಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.