ಜಿಲ್ಲೆ

ಕೆಬಿಜೆಎನ್ಎಲ್ ಕಚೇರಿಗೆ ಬೀಗ ಜಡಿದು ರೈತರ ಆಕ್ರೋಶ: ಕಾಲುವೆಗೆ ನೀರು ಹರಿಸಲು ಆಗ್ರಹ

ವಿಜಯಪುರ: ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಕೆಬಿಜೆಎನ್ ಎಲ್ ಕಚೇರಿಗೆ ರೈತರು ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಸಿಂದಗಿ ತಾಲೂಕಿನ ರಾಂಪೂರ ಕ್ಯಾಂಪ್ ನಲ್ಲಿರುವ ಉಪ ವಿಭಾಗಾಧಿಕಾರಿ ಕಚೇರಿಗೆ ಮಂಗಳವಾರ ರೈತರು ಬೀಗ ಜಡಿದರು.

ವಿತರಣಾ ಕಾಲುವೆ 32 ರಿಂದ ಗಣಿಹಾರ, ಹಿಕ್ಕನಗುತ್ತಿ ಭಾಗಕ್ಕೆ ನೀರು ಹರಿಸದ ಕಾರಣ ರೈತರು ಆಕ್ರೋಶಗೊಂಡಿದ್ದಾರೆ.

ಪ್ರಸ್ತುತ ಬೇಸಿಗೆ ಆರಂಭವಾಗುತ್ತಿದ್ದು ನೀರಿನ ಸಮಸ್ಯೆ ಹೆಚ್ಚಾಗಿದೆ. ಜನ ಜಾನುವಾರು ನೀರಿನ ಸಮಸ್ಯೆಗೆ ತುತ್ತಾಗಿದ್ದು ಕೂಡಲೇ ನೀರು ಹರಿಸಲು ರೈತರು ಆಗ್ರಹಿಸಿದರು.

ಅಧಿಕಾರಿ ರಾಜೇಶ್ ಚವ್ಹಾಣ ಸೇರಿದಂತೆ ಅಧಿಕಾರಿಗಳ ವಿರುದ್ಧ ಕೆಲ ಕಾಲ ವಾಗ್ವಾದ ನಡೆಸಿದ ರೈತರು ಬಳಿಕ ಕಚೇರಿಗೆ ಬೀಗ ಜಡಿದರು.