ಚಿತ್ರದುರ್ಗ: ಜಿಲ್ಲೆ ಜನರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಕೇಂದ್ರ ಸಹಕರಿಸಲಿದೆ ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು. ಡಿಸಿ ಕಚೇರಿಯಲ್ಲಿ ಶುಕ್ರವಾರ ವಿದ್ಯುತ್ ಹಾಗೂ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಯೋಜನೆಗಳ ಕುರಿತಂತೆ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಜಿಲ್ಲೆಗೆ ಪ್ರಸ್ತುತ ಬೇಡಿಕೆ 270 ಮೆಗಾವ್ಯಾಟ್ ವಿದ್ಯುತ್ ಬದಲಿಗೆ 180 ಮೆ.ವ್ಯಾ.ಪೂರೈಕೆಯಾಗುತ್ತಿದೆ. ಬೇ ಡಿಕೆ ಅನುಗುಣವಾಗಿ ವಿದ್ಯುತ್ ಪೂರೈಕೆ ಆದರೆ ರೈತರಿಗೆ ದಿನಕ್ಕೆ 7-8 ಗಂಟೆ ವಿದ್ಯುತ್ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಮೊಳಕಾಲ್ಮೂರು ಹಾಗೂ ಹಿರಿಯೂರು ತಾಲೂಕುಗಳಲ್ಲಿ ವಿತರಣಾ ಕೇಂದ್ರಗಳ ಸ್ಥಾಪನೆಗೆ ಮಂಜೂರಾತಿ ಸಿಕ್ಕಿದೆ. ಚಿತ್ರದುರ್ಗ ತಾಲೂಕು ಭರಮಸಾಗರ ಸೇರಿದಂತೆ ವಿವಿಧೆಡೆ ವಿದ್ಯುತ್ ವಿತರಣಾ ಕೇಂದ್ರಗಳಿಗೆ ಸಲ್ಲಿಸಿರುವ ಪ್ರಸ್ತಾವನೆ ವಿವರದ ವರದಿ ಒಂದು ವಾರದ ಒಳಗೆ ತಮ್ಮ ಕೈಸೇರಬೇಕೆಂದು ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯನ್ನು ಕಾಡಿರುವ ಬರದಿಂದಾಗಿ ಬೋರ್‌ವೆಲ್‌ಗಳ ಬಳಕೆ ಹೆಚ್ಚಾಗಲಿದ್ದು,ಸಮರ್ಪಕ ವಿದ್ಯುತ್ ಪೂರೈಕೆ ಅಗತ್ಯವಿದೆ. ರೈತರ ಅನುಮತಿ ಇಲ್ಲದೆ ಅವರ ಜಮೀನಲ್ಲಿ ಟವರ್ ನಿರ್ಮಿಸುತ್ತಿರುವ ದೂರಿನ ಕುರಿತಂತೆ ಸರ್ವೆನಡೆಸಿ,ವರದಿ ಕೊಡುವಂತೆ ತಿಳಿಸಿದರು.
ವಿದ್ಯುತ್ ಯೋಜನೆಗಳ ಬಗ್ಗೆ ಸಂಸದರ ಧ್ಯಕ್ಷತೆ ಕಾಲಕಾಲಕ್ಕೆ ಸಭೆ ನಡೆಸುವಂತೆ 2021ರ ಸೆಪ್ಟೆಂಬರ್‌ನಲ್ಲಿ ಸೂಚನೆ ಬಂದಿದ್ದರೂ,ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಅಧಿಕಾರಿಗಳು ಸಭೆ ನಡೆಸಿಲ್ಲ. ಜಿಲ್ಲಾಧಿಕಾರಿ ಕೂಡ ಮಾಹಿತಿ ನೀಡಿಲ್ಲ. ಯಾವೆಲ್ಲ ಯೋಜನೆಗಳನ್ನು ಕೈಗೆತ್ತಿ ಕೊಳ್ಳಲಾಗಿದೆ?
ಪ್ರಗತಿಯಲ್ಲಿರುವ ಯೋಜನೆಗಳು,ಜಿಲ್ಲೆಗೆ ಅಗತ್ಯವಿರುವ ಹೊಸ ಯೋಜನೆಗಳು,ರೈತರ ಸಮಸ್ಯೆಗಳೆಡೆ ಮಾಹಿತಿ ನೀಡಿಲ್ಲ.
ಕೆಪಿಟಿಸಿಎಲ್ ನಿಮ್ಮ ಸ್ವಂತ ಆಸ್ತಿ ಅಲ್ಲವೆಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕೆಪಿಟಿಸಿಎಲ್‌ನಿಂದ 2 ವರ್ಷಗಳ ಅವಧಿಯಲ್ಲಾಗಿರುವ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ,ವರದಿ ಸಲ್ಲಿಸುವಂತೆ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರಿಗೆ ತಿಳಿಸಿದರು.
ಶೀಘ್ರ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್
ಜಿಲ್ಲೆಯ 43 ಟವರ್‌ಗಳಲ್ಲಿ ಶೀಘ್ರ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಪ್ರಾರಂಭವಾಗಲಿದ್ದು,ಜಿಲ್ಲೆಯ ಎಲ್ಲ ಗ್ರಾಪಂಗಳಿಗೂ ಬಿಎಸ್‌ಎನ್‌ಎಲ್ ಹಾಗೂ ಕೇಬಲ್ ಆಪರೇಟರ್‌ಗಳ ಸಹಯೋಗದೊಂದಿಗೆ ಪಿಪಿಪಿ ಮಾದರಿಯಲ್ಲಿ ಡಿಜಿಟಲ್ ಸಂಪರ್ಕ ಪಡೆಯಲು ಕ್ರಮಕೈಗೊಳ್ಳಲಾಗುವು ದು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಪಂ ಸಿಇಒ,ಗ್ರಾಪಂ.ಪಿಡಿಒ ಗಳು ಹಾಗೂ ಕೇಬಲ್ ಆಪರೇಟರ್‌ಗಳೊಂದಿಗೆ ಸಭೆ ಏರ್ಪಡಿಸುವಂತೆ ಬಿಎಸ್ ಎನ್‌ಎಲ್ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿರುವ 189 ಗ್ರಾ.ಪಂ.ಗಳ ಪೈಕಿ,79ರಲ್ಲಿ ಬಿಎಸ್‌ಎನ್‌ಎಲ್ ಡಿಜಿಟಲ್ ಸಂಪರ್ಕವಿದ್ದು,ಡಿಜಿಟಲ್ ಆಡಳಿತ ಕೊಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಆಶಯಕ್ಕೆ ಬಿಎಸ್‌ಎನ್‌ಎಲ್ ಸ್ಪಂದಿಸುತ್ತಿಲ್ಲ. ಡಿಜಿಟಲ್ ಸಂಪರ್ಕವಿಲ್ಲದಿದ್ದರೆ ಕೂಡಲೇ ವ್ಯವಸ್ಥೆ ಮಾಡುವುದಾಗಿ ಬಿ ಎಸ್ ಎನ್‌ಎಲ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ನಿಗಮದ ಸ್ಥಳೀಯ ಅಧಿಕಾರಿಗಳು ಸಿದ್ಧತೆ ನಡೆಸಿಲ್ಲ. ಅಧಿಕಾರಿಗಳು ತಮ್ಮ ಕಾರ‌್ಯ ವೈಖರಿ ಬದಲಾಯಿಸಿಕೊಳ್ಳ ಬೇಕಿದೆ ಎಂದರು.
ದಾವಣಗೆರೆ ಬಿಎಸ್‌ಎನ್‌ಎಲ್ ಜನರಲ್ ಮ್ಯಾನೇಜರ್ ಧನಂಜಯ ಕುಮಾರ್ ತ್ರಿಪಾಠಿ ಮಾತನಾಡಿ,ಚಿತ್ರದುರ್ಗ ಜಿಲ್ಲೆಯಲ್ಲಿ 43 ಟವ ರ್ ಗಳಲ್ಲಿ ಶೀಘ್ರ 4ಜಿ ನೆಟ್‌ವರ್ಕ್ ಪ್ರಾರಂಬಿಸಲಾಗುವುದು. ಚಳ್ಳಕೆರೆ ತಾಲೂಕಲ್ಲಿ 3,ಚಿತ್ರದುರ್ಗ7,ಹಿರಿಯೂರು-6,ಹೊಳಲ್ಕೆರೆ-7,ಹೊಸ ದುರ್ಗ-12 ಹಾಗೂ ಮೊಳಕಾಲ್ಮೂರು ತಾಲೂಕಲ್ಲಿ 8 ಟವರ್‌ಗಳಲ್ಲಿ 4ಜಿ ನೆಟ್‌ವರ್ಕ್ ಪ್ರಾರಂಭಿಸಲಾಗುವುದು.
ಜಿಲ್ಲೆಯಲ್ಲಿ ಯಾವುದೇ ಸಿಗ್ನಲ್ ಲಭ್ಯವಿರದ ಪ್ರದೇಶಗಳನ್ನು ಗುರುತಿಸಿ,112 ಟವರ್‌ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೆಪಿಟಿಸಿಎಲ್ ವಲಯ ಇಂಜಿನಿಯರ್ ದಿವಾಕರ್,ಬಿಎಸ್‌ಎನ್‌ಎಲ್ ಡೆಪ್ಯುಟಿ ಜನರಲ್ ಮ್ಯಾನೇಜರ್ ಪಿ.ಗೋಪಾಲ್,ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜನಾರ್ಧನ್ ಮತ್ತಿತರ ಅಧಿಕಾರಿಗಳಿದ್ದರು.
(ಸಿಟಿಡಿ 1 ಸೆಂಟ್ರಲ್ ಮಿನಿಸ್ಟರ್)
ಚಿತ್ರದುರ್ಗದಲ್ಲಿ ಶುಕ್ರವಾರ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರು ವಿದ್ಯುತ್ ಮತ್ತು ನೆಟ್‌ವರ್ಕ್ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಪಿಟಿಸಿಎಲ್,ಬಿಎಸ್‌ಎನ್‌ಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಇದ್ದಾರೆ.