ಜಿಲ್ಲೆ

ಕೆಪಿಎಸ್ ಸಿ ಪರೀಕ್ಷೆಯಲ್ಲಿ ಆಯ್ಕೆ

ಮೈಸೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷೆಯಲ್ಲಿ ನಗರದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ನವೋ-ಪ್ರಮತಿಯ ನಾಲ್ವರು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.
ಸಹಕಾರ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಪಿ.ಹೇಮಾ, ಗೃಹ ಇಲಾಖೆಯ ಅಸಿಸ್ಟಂಟ್ ಸೂಪರಿಂಡೆಂಟ್ ಆಫ್ ಪ್ರಿಸನ್ ಅಗಿ ಸೌಭಾಗ್ಯ ಬಾಬುರಾವ್ ಸವಾದ್‌ಕರ್, ತಹಸೀಲ್ದಾರ್ ಗ್ರೇಡ್ -2 ಅಗಿ ಕೆ.ಎನ್.ಚೈತ್ರ, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತರಾಗಿ ಪುಂಡಲೀಕ ಆನವಾಲ್ ಅವರು ನಿಯೋಜನೆಗೊಂಡಿದ್ದು, ಅಭ್ಯರ್ಥಿಗಳ ಸಾಧನೆಯನ್ನು ಕೇಂದ್ರದ ಅಧ್ಯಕ್ಷರಾದ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಕಾರ್ಯಕಾರಿ ಸಮಿತಿ ಅಧ್ಯಕ್ಷ ರವಿ ಡಿ.ಚೆನ್ನಣ್ಣನವರ್, ಸಂಯೋಜಕ ಎಸ್.ಫಣಿರಾಜ್ ಇತರರು ಶ್ಲಾಘಿಸಿದ್ದಾರೆ.