ಜಿಲ್ಲೆ

ಕೆಪಿಆರ್ ಕಾರ್ಖಾನೆ ಪರಿಹಾರ ನೀಡಲಿ

ಕಲಬುರಗಿ: ಅಫಜಲಪುರ ತಾಲೂಕಿನ ಚಿಣಮಗೇರಾ ಗ್ರಾಮದಲ್ಲಿನ ಕೆಪಿಆರ್ ಸಕ್ಕರೆ ಕಾರ್ಖಾನೆಯಿಂದ ಹೊರ ಬರುತ್ತಿರುವ ಕಲುಷಿತ ನೀರು, ಗಾಳಿಯಿಂದ ಸುತ್ತಲಿನ ಗ್ರಾಮಸ್ಥರು, ರೈತರಿಗೆ ತೊಂದರೆ ಆಗುತ್ತಿದ್ದು, ಪರಿಹಾರ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಖಾನೆ ಕಲುಷಿತ ನೀರು ಕೊಳವೆ ಬಾವಿಯ ನೀರು ಕಲುಷಿತ ಆಗುತ್ತಿದೆ. ಸುತ್ತಲಿನ ಪರಿಸರ ಹಾಳಾಗುತ್ತಿದೆ. ಕಾರ್ಖಾನೆ ಪಕ್ಕದ ಜಮೀನುಗಳಲ್ಲಿನ ಬೆಳೆ ಸುಟ್ಟು ಹೋಗುತ್ತಿದೆ. ಬೆಳೆ ಬೆಳೆಯಲು ಆಗುತ್ತಿಲ್ಲ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ಲೋಪ, ದೋಷ ಸರಿಪಡಿಸಬೇಕು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಸೇನೆ ಜಿಲ್ಲಾಧ್ಯಕ್ಷ ರವಿ ದೇಗಾಂವ, ಪ್ರಮುಖರಾದ ಸಂತೋಷ ಪಾಟೀಲ್, ಬಸವರಾಜ ಪಾಟೀಲ್ ದುಧನಿ, ಶೇಖರ ವಗದರ್ಗಿ ಇತರರಿದ್ದರು.