ಜಿಲ್ಲೆ

ಕೆಜಿಎಫ್​ ಸಿನಿಮಾ ಶೂಟಿಂಗ್​ ಸ್ಥಳ ವೀಕ್ಷಣೆಗೆ ಪ್ರವಾಸಿಗರ ದಂಡು : ಹೋಟೆಲ್​, ಚಾಟ್​ ಸೆಂಟರ್​ಗಳಿಗೆ ಹೆಚ್ಚಾದ ಬೇಡಿಕೆ, ಸುತ್ತಮುತ್ತಲ ಪ್ರವಾಸಿ ತಾಣಗಳಿಗೂ ಭೇಟಿ

ಪಾ.ಶ್ರೀ.ಅನಂತರಾಮ್​ ಕೋಲಾರ

ಬಹುಭಾಷೆಗಳಲ್ಲಿ ನಿರ್ಮಾಣಗೊಂಡು ದೇಶ&ವಿದೇಶಗಳಲ್ಲಿ ಸೂಪರ್​ ಹಿಟ್​ ಆಗಿರುವ ಕೆಜಿಎಫ್​ ಚಾಪ್ಟರ್​&2 ಸಿನಿಮಾದ ಚಿತ್ರೀಕರಣ ನಡೆದಿರುವ ಕೋಲಾರ ಚಿನ್ನದ ಗಣಿ ಪ್ರದೇಶ (ಕೆಜಿಎಫ್​) ಇದೀಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.

ಕೆಜಿಎಫ್​ ಚಾಪ್ಟರ್​&1 ಚಿತ್ರೀಕರಣಕ್ಕೆ ಅವಕಾಶ ನೀಡದಂತೆ ಕೆಲವರು ಕೋರ್ಟ್​ ಮೆಟ್ಟಿಲೇರಿದ್ದರು. ಪ್ರಕರಣ ಇತ್ಯರ್ಥವಾಗಿ ಚಿತ್ರ ಲೋಕಾರ್ಪಣೆಗೊಂಡ ಬಳಿಕ ಕೆಜಿಎಫ್​ ಪ್ರವಾಸಿಗರ ತಾಣವಾಗಿದೆ. ಪ್ರವಾಸಿಗರು ಕೆಜಿಎಫ್​ನತ್ತ ಮುಖ ಮಾಡುತ್ತಿರುವುದರಿಂದ ಇಲ್ಲಿನ ಹೋಟೆಲ್​ಗಳಿಗೆ, ಚಾಟ್​ ಸೆಂಟರ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸೈನೈಡ್​ ಗುಡ್ಡ ವೀಕ್ಷಣೆ ಮಾತ್ರವಲ್ಲದೆ, ಗಣಿ ಪ್ರದೇಶ, ಬಿಜಿಎಂಎಲ್​, ಕೃಷ್ಣಾವರಂನಲ್ಲಿರುವ ಜಿಂಕೆ, ಕೋಟಲಿಂಗ ೇತ್ರ, ಬೇತಮಂಗಲದ ಜಲಾಶಯ, ಬಂಗಾರು ತಿರುಪತಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು, ಚನ್ನೆ$, ಮುಂಬೈ ಹಾಗೂ ದೆಹಲಿಯಿಂದಲೂ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಬಿಜಿಎಂಎಲ್​ ಭದ್ರತಾ ಸಿಬ್ಬಂದಿ ಪ್ರವಾಸಿಗರನ್ನು ತಡೆದಿದ್ದಾರೆಯಾದರೂ ಬೇರೆ ಮಾರ್ಗದಿಂದ ಗುಡ್ಡವನ್ನು ಪ್ರವೇಶಿಸಿ ಚಿತ್ರೀಕರಣದ ಸ್ಥಳ ವೀಕ್ಷಣೆ ಮಾಡಿ, ತಾವು ಬಂದ ಗುರುತಿಗಾಗಿ ಗಿಡ ನೆಟ್ಟು ಹೋಗುತ್ತಿದ್ದಾರೆ.

1880ರಲ್ಲಿ ಸ್ಥಾಪಿತವಾದ ಕೆಜಿಎಫ್​ ಚಿನ್ನದ ಗಣಿ 1980ರಲ್ಲಿ ಶತಮಾನೋತ್ಸವ ಆಚರಿಸಿಕೊಂಡಿದೆ. ವಿಶ್ವಕ್ಕೆ ಚಿನ್ನ ನೀಡಿದ ಖ್ಯಾತಿ ಪಡೆದಿದೆ. ಆದರೆ ಚಿನ್ನದ ಗಣಿ 1981&2000 ಅವಧಿಯಲ್ಲಿ ನಿರಂತರವಾಗಿ ನಷ್ಟ ಅನುಭವಿಸಿದ ಕಾರಣ ಕೇಂದ್ರ ಸರ್ಕಾರ ಗಣಿಯನ್ನು ಮುಚ್ಚಿರುವುದರಿಂದ ಕೆಜಿಎಫ್​ ಸಾಮಾಜಿಕವಾಗಿ, ಆರ್ಥಿಕವಾಗಿ ನೆಲಕಚ್ಚುವಂತಾಗಿದೆ.

ಗಣಿಯಿಂದ ಹೊರ ತೆಗೆದ ಲಾಂತರ ಟನ್​ ಮಣು ಸೈನೈಡ್​ ಗುಡ್ಡವಾಗಿ ಪರಿವರ್ತನೆಗೊಂಡಿದೆ. ನಗರಕ್ಕೆ ಈ ಗುಡ್ಡ ಮುಕುಟಪ್ರಾಯವಾಗಿದೆ. ಈ ಗುಡ್ಡದಲ್ಲಿ ಚಿನ್ನದ ಅದಿರು ಇದೆ ಎಂಬ ಕಾರಣಕ್ಕೆ ಕಳ್ಳರು ಗುಡ್ಡವನ್ನು ವಿಕೃತಗೊಳಿಸಿದ್ದಾರೆ. ವಿದೇಶಗಳಲ್ಲಿರುವ ಚಿನ್ನದ ಗಣಿಯ ಆಡಳಿತ ಮಂಡಳಿ ಸೈನೈಡ್​ ಗುಡ್ಡವನ್ನು ವಶಕ್ಕೆ ಪಡೆದು ಅದಿರು ಕೊಂಡೊಯ್ಯಲು ಪ್ರಯತ್ನಿಸಿದರಾದರೂ ಕೇಂದ್ರ ಒಪ್ಪಿಗೆ ನೀಡಿಲ್ಲ.

ಆಕರ್ಷಕ ಗುಡ್ಡಗಳು: ಬಿರುಗಾಳಿ ಬೀಸಿದರೆ ಗುಡ್ಡದಿಂದ ಧೂಳು ಹೊರ ಹೊಮ್ಮುವುದರಿಂದ ಜನ&ಜಾನುವಾರುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪರಿವಾರವಾದಿಗಳು ಆತಂಕ ವ್ಯಕ್ತಪಡಿಸಿದ್ದರಿಂದ ಗುಡ್ಡದ ಮೇಲೆ ಗಿಡಗಳನ್ನು ಬೆಳೆಸಲಾಗಿದೆ. ಈಜಿಪ್ಟ್​ನ ಪಿರಮಿಡ್​ ರೀತಿ ಸೈನೈಡ್​ ಗುಡ್ಡ ವಿನ್ಯಾಸಗೊಂಡಿರುವುದರಿಂದ ಜನರು ಆಕರ್ಷಿತರಾಗಿ ಒಮ್ಮೆಯಾದರೂ ನೋಡಬೇಕೆಂಬ ಕುತೂಹಲದಿಂದ ಬರುತ್ತಿದ್ದಾರೆ.

ಅಭಿವೃದ್ಧಿಗೆ ಮೀನಮೇಷ: ಕೆಜಿಎ್​ ನಗರದಲ್ಲಿ ಚಿನ್ನದ ಗಣಿಗೆ ಸೇರಿದ 12.500 ಎಕರೆ ಪೈಕಿ 3500 ಎಕರೆ ಜಾಗವನ್ನು ರಾಜ್ಯ ಸರ್ಕಾರ ಕೈಗಾರಿಕಾ ಹಬ್​ ಆಗಿ ಅಭಿವೃದ್ಧಿಪಡಿಸಲು ಚಿಂತಿಸಿದೆಯಾದರೂ ಕಾಮಗಾರಿಗೆ ಚಾಲನೆ ದೊರೆತಿಲ್ಲ. ಕೆಜಿಎಫ್​ನಲ್ಲಿ ಇನ್ನೂ ಚಿನ್ನ ಲಭ್ಯವಿದೆ ಎಂಬ ತರ ಅಭಿಪ್ರಾಯದ ಮೇರೆಗೆ ಚಿನ್ನದ ನಿೇಪ ಶೋಧನೆಗಾಗಿ ಸ್ಯಾಂಪಲ್​ಗಳನ್ನು ತೆಗೆದು ಹೈದರಾಬಾದಿನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಅಲ್ಲಿಂದ ವರದಿ ಬರುವುದು ವಿಳಂಬವಾಗುತ್ತಿದೆ.

ಚಿನ್ನದ ಗಣಿ ಪುನರ್​ ಆರಂಭಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿನ್ನದ ಉತ್ಪಾದನೆಗೆ ಹೆಚ್ಚಿನ ಬಂಡವಾಳ ಹೂಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಕೆಜಿಎಫ್​ ಸಮಗ್ರ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಕಾರ್ಯಕ್ರಮ ರೂಪಿಸಿದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಕೆಜಿಎಫ್​ ಹೆಚ್ಚಿನ ರೀತಿಯಲ್ಲಿ ಪ್ರಗತಿ ಸಾಧಿಸುತ್ತದೆ. ಜತೆಗೆ ಸೈನೈಡ್​ ಗುಡ್ಡವನ್ನು ಪ್ರವಾಸಿ ತಾಣವಾಗಿಸುವುದರಿಂದ ಆಗುವ ಲಾಭ&ನಷ್ಟ ಕುರಿತು ಗಣಿ ಅಧಿಕಾರಿಗಳು ಸಮೀೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬಂದರೆ ಒಳ್ಳೆಯದು. ಸುರಕ್ಷತೆ ದೃಷ್ಟಿಯಿಂದ ಹಾಗೂ ಚಿನ್ನದ ಅದಿರು ಕಳ್ಳತನವಾಗುವುದನ್ನು ತಪ್ಪಿಸುವ ಸಲುವಾಗಿ ಪ್ರವಾಸಿ ತಾಣವನ್ನಾಗಿಸಲು ಕೇಂದ್ರ ಸರ್ಕಾರ ನಿರಾಕರಿಸುವ ಸಾಧ್ಯತೆ ಇರುವುದರಿಂದ ಕೆಜಿಎಫ್​ ಚಿತ್ರ ನಿರ್ಮಾಣ ಸ್ಥಳ ಕೇವಲ ತಾತ್ಕಾಲಿಕ ಪ್ರೇಕ್ಷಣಿಯ ತಾಣವಾಗಿ ಕಾಣಲು ಸಾಧ್ಯವೇ ಹೊರತು ಮೂಲಸೌಕರ್ಯ ಕಲ್ಪಿಸುವುದು ಅನುಮಾನವಾಗಿದೆ.