ಜಿಲ್ಲೆ

ಕೆಕೆಸಿಸಿಐ ಪದಾಧಿಕಾರಿಗಳ ಘೋಷಣೆ

ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಕೆಕೆಸಿಸಿಐ) ೨೦೨೫-೨೦೨೭ನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ , ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಸದಸ್ಯರ ಪಟ್ಟಿಯನ್ನು ಭಾನುವಾರ ಅಧಿಕೃತವಾಗಿ ಘೋಷಿಸಿ, ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ತೀವ್ರ ಕುತೂಹಲ ಮೂಡಿಸಿದ್ದ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳೆಲ್ಲ ನಾಮಪತ್ರ ವಾಪಸ್ ತೆಗೆದುಕೊಂಡಿದ್ದರಿAದ ಆಯ್ಕೆ ನಿಶ್ಚಿತವಾಗಿದ್ದು, ಅದರಂತೆ ಮತದಾನ ಮತ್ತು ಫಲಿತಾಂಶ ಘೋಷಣೆ ದಿನವಾದ ಭಾನುವಾರ ಚುನಾವಣೆ ಅಧಿಕಾರಿಗಳಾದ ಮಧುಸೂದನ ಶಾಸ್ತಿç, ಮಧುಕರ ಮಾಶಾಳಕರ್, ಚಂದ್ರಕಾAತ ಚಾಗಿ ಪದಾಧಿಕಾರಿಗಳ ಹೆಸರು ಘೋಷಿಸಿದರು.

ಶರಣು ಪಪ್ಪ (ಅಧ್ಯಕ್ಷ), ಕೇದಾರ ರಘೋಜಿ (ಉಪಾಧ್ಯಕ್ಷ), ಶಿವರಾಜ ಇಂಗಿನಶೆಟ್ಟಿ (ಕಾರ್ಯದರ್ಶಿ), ಗಿರೀಶ ಅಣಕಲï (ಜಂಟಿ ಕಾರ್ಯದರ್ಶಿ), ಉತ್ತಮ್ ಬಜಾಜ್ (ಖಜಾಂಚಿ), ಅಭಿಜೀತ್ ಪಡಶೆಟ್ಟಿ, ಆನಂದ ಹೊಳ್ಕುಂದಿ, ಅನುದೀಪ ದಂಡೋತಿ, ದಿನೇಶ ಪಾಟೀಲ್, ಜಗದೀಶ ಪಾಟೀಲ್, ಲಿಂಗರಾಜ ಭಾವಿಕಟ್ಟಿ, ಸಂದೀಪ ಮಿಶ್ರಾ, ರಾಹುಲ್ ಟೆಂಗಳಿ, ರಾಜಶೇಖರ ದುಕಂದರ, ರವಿಶಂಖರ ಜೆ, ಶರಣಬಸಪ್ಪ ಜೀವಣಗಿ, ಸಂತೋಶ ನಂದ್ಯಾಳ, ಸೈಯದ್ ಮೌಝಮ ಅಲಿ, ಶಾಂತರೆಡ್ಡಿ ಪೇಠಶಿರೂರ ಮತ್ತು ವಿನಯ ಚಿಕತ್ವರ ಸದಸ್ಯರಾಗಿ ಆಯ್ಕೆಯಾಗಿ, ಪ್ರಮಾಣ ಪತ್ರ ಸ್ವೀಕರಿಸಿದರು.

ಅಮೃತಕುಮಾರ ಸಂಗಾವಿ, ಸಂಪತಕುಮಾರ ಪಾಟೀಲ ಮತ್ತು ನಾಗರಾಜ ರೇಷ್ಮಿ ( ಗ್ರಾಮೀಣ ವಿಭಾಗ) ಹಾಗೂ ವಿಷ್ಣು ಚೇತನ ಕಾರ್ಪೊರೇಟ್ ವಿಭಾಗದ ಸದಸ್ಯರಾಗಿ ಆಯ್ಕೆ ಘೋಷಿಸಲಾಯಿತು.

ಅವಿರೋಧ ಆಯ್ಕೆ ಹಿನ್ನೆಲೆಯಲ್ಲಿ ಪರಸ್ಪರ ಸನ್ಮಾನ, ಸಿಹಿ ತಿನ್ನಿಸಿ ಸಂಭ್ರಮಿಸಿದರು. ಕೆಕೆಸಿಸಿಐ ಅಧ್ಯP್ಷÀ ಶಶಿಕಾಂತ ಪಾಟೀಲ್, ಕಾರ್ಯದರ್ಶಿ ಮಂಜುನಾಥ ಜೇವರ್ಗಿ ಇತರರಿದ್ದರು.

ಬಾಕ್ಸ್ ಸಹಕಾರ ಬ್ಯಾಂಕ್ ಸ್ಥಾಪನೆ ಉz್ದÉÃಶ ಸ್ಪರ್ಧೆ ಕೈಬಿಟ್ಟು ಸೌಹಾರ್ದದಿಂದ ಸಾಗಿ, ಅವಿರೋಧ ಆಯ್ಕೆಗೆ ಸಹಕರಿಸಿ ಎಲ್ಲರೂ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಇಡೀ ನಾಡಿಗೆ ಉತ್ತಮ ಸಂದೇಶ ನೀಡಿದ್ದು, ಎಲ್ಲರ ತ್ಯಾಗ, ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿz್ದÉÃನೆ ಎಂದು ನಿಯೋಜಿತ ಅಧ್ಯಕ್ಷ ಶರಣು ಪಪ್ಪಾ ಹೇಳಿದರು. ಹಿಂದಿನ ಅಧ್ಯಕ್ಷರು ಹಲವು ಕೆಲಸ ಮಾಡಿದ್ದು, ಅದನ್ನು ಮುಂದುವರಿಸಿಕೊAಡು ಹೋಗಲು ಸಹಕಾರ, ಮಾರ್ಗದರ್ಶನ ಬೇಕು. ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡ್ಯೊಯ್ಯುವೇ ಎಂದು ಹೇಳಿದರು. ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ, ಜವಳಿ ಪಾರ್ಕ್ ಸ್ಥಾಪನೆ, ಜಿಎಸ್‌ಟಿ ಸಮಸ್ಯೆ, ವ್ಯಾಪಾರಿಗಳ ಪಾರ್ಕಿಂಗ್ ಸಮಸ್ಯೆಗೆ ಸ್ಪಂದನೆ ಸೇರಿ ವ್ಯಾಪಾರಿಗಳಿಗೆ ಆರ್ಥಿಕವಾಗಿ ನೆರವಾಗಲು ಸಂಸ್ಥೆಯಿAದ ಸಹಕಾರ ಬ್ಯಾಂಕ್ ಸ್ಥಾಪಿಸುವ ಉz್ದÉÃಶವಿದೆ. ಸಂಸ್ಥೆಯಲ್ಲಿ ೩೪೦೦ ಸದಸ್ಯರಿದ್ದು, ೨೦೦೦ ಸದಸ್ಯರಾದರೂ ಸಹಕಾರಿ ಬ್ಯಾಂಕ್ ನಡೆಸಬಹುದು ಎಂದು ಹೇಳಿದರು.

ಎರಡು ಬಾರಿ ಆಡಳಿತ ಮಂಡಳಿ ಸದಸ್ಯನಾಗಿ ಕೆಲಸ ಮಾಡಿದ್ದು, ಎಲ್ಲರ ಸಹಕಾರದಿಂದ ಅವಿರೋಧ ಆಯ್ಕೆಯಾಗಿz್ದÉÃನೆ. ಹಿರಿಯರ ಮಾರ್ಗದರ್ಶನ, ಸಹಪಾಠಿಗಳ ಸಹಕಾರದೊಂದಿಗೆ ಕೆಲಸ ನಿರ್ವಹಿಸಿ, ಸಂಸ್ಥೆಯ ಸೇವೆ ವಿಸ್ತರಿಸಿ, ವ್ಯಾಣಿಜ್ಯೋದ್ಯಮಿಗಳ ಹಿತ ಕಾಪಾಡಲು, ಈ ಭಾಗದ ಪ್ರಗತಿಗೆ ಶ್ರಮಿಸಲಾಗುವುದು. | ಶಿವರಾಜ ಇಂಗಿನಶೆಟ್ಟಿ, ಕಾರ್ಯದರ್ಶಿ ಕೆಕೆಸಿಸಿಐ ನಿಯೋಜಿತ ಕಾರ್ಯದರ್ಶಿ