ಜಿಲ್ಲೆ

ಕೆಕೆಆರ್‌ಡಿಬಿ ಅನುದಾನ ಪೂರ್ಣ ಬಳಕೆ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ಕಳೆದ ವರ್ಷ ೨೦೨೪ ಫೆ.೧೪ರಂದು ಐದು ಸಾವಿರ ರೂ. ಅನುದಾನ ನೀಡಿದ್ದು, ಅದರಲ್ಲಿ ಇದುವರೆಗೆ ೪,೫೦೦ ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮತಿ ಸಿಕ್ಕಿದೆ. ಮಂಡಳಿಯೂ ವಾರ್ಷಿಕ ಸಾವಿರ ಕೋಟಿ ರೂ.ಸಹ ಬಳಸಲ್ಲ ಎಂಬ ಅಪವಾದ ಮುಕ್ತ ಮಾಡಲಾಗಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.

ಮಂಡಳಿಯ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಡಳಿಯಿAದ ಶೈಕ್ಷಣಿಕ ಅಭಿವೃದ್ಧಿಗೆ ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ, ಕಲ್ಯಾಣ ಪಥ ಸೇರಿ ವಿವಿಧ ಯೋಜನೆ ರೂಪಿಸಿ, ಅನುಷ್ಠಾನ ಮಾಡಲಾಗುತ್ತಿದೆ. ಪ್ರಸಕ್ತ ವರ್ಷವೂ ಇತ್ತೀಚೆಗೆ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಐದು ಸಾವಿರ ರೂ. ನೀಡಲು ವಿನಂತಿಸಿದ್ದು, ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.

ಮAಡಳಿಗೆ ನೀಡುವ ಹಣ ಸಂಪೂರ್ಣ ಖರ್ಚು ಮಾಡಲು ಪ್ರತ್ಯೇಕ ೨೨೯ ಇಂಜಿನಿಯರ್‌ಗಳ ವಿಭಾಗ ಸ್ಥಾಪನೆ ಕುರಿತು ಸಿ.ಎಂ. ಜತೆ ಚರ್ಚಿಸಿದ್ದು, ಮಂಡಳಿಯಲ್ಲಿನ ಖಾಲಿ ಹುz್ದೆ ಭರ್ತಿ ಮಾಡಲಾಗುವುದು. ಸೆ.೧೭ರಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಳಿಯ ೮೫೭ ಕೋಟಿ ರೂ. ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದರಿಂದ ೪೩೯ ಕೋಟಿ ರೂ. ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ನಗರ ಆರೋಗ್ಯ ಉಪ ಕೇಂದ್ರ ನಿರ್ಮಾಣ, ಸ್ಕಾÈನಿಂಗ್, ದುರಸ್ತಿ, ಆಂಬುಲೆನ್ಸ್ ಸೇರಿ ವಿವಿಧ ಸೇವೆ ಒದಗಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಅಲ್ಪಸAಖ್ಯಾತ ಇಲಾಖೆ ಸಹಯೋಗದಲ್ಲಿ ೪೮ ಮೌಲಾನಾ ಅಜಾದ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆ, ೧೫೬ ಕೋಟಿ ರೂ.ನಲ್ಲಿ ೩೪ ಬಿಸಿಎಂ ವಸತಿ ನಿಲಯ, ೧೮೬ ಕೋಟಿ ರೂ.ನಲ್ಲಿ ಎಸ್ಸಿ, ಎಸ್ಟಿ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಕಲ್ಯಾಣ ಪಥ ಯೋಜನೆಗೆ ೩೩೦ ಕೋಟಿ ರೂ. ಮಂಡಳಿ ನೀಡಿದ್ದು, ಶೀಘ್ರವೇ ಸಿ.ಎಂ.ಚಾಲನೆ ನೀಡಲಿz್ದÁರೆ. ಕಕ ಭಾಗದ ನೂತನ ೧೬ ತಾಲೂಕಿನಲ್ಲಿ ತಲಾ ೮.೬೦ ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.

ಮAಡಳಿ ಕಾರ್ಯದರ್ಶಿ ಎಂ.ಸುAದರೇಶ ಬಾಬು ಇದ್ದರು.