ಜಿಲ್ಲೆ

ಕೆಕೆಆರ್‌ಡಿಬಿ ಅಕ್ರಮ ಸಿಬಿಐ ತನಿಖೆ ಆಗಲಿ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಬಿವೃದ್ಧಿ ಮಂಡಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿ ಸಂಘದಲ್ಲಿ ನಡೆದಿರುವ ಅಕ್ರಮಗಳ ತನಿಖೆ ಸಿಬಿಐಗೆ ವಹಿಸಬೇಕು ಎಂದು ಕಲ್ಯಾಣ ಕರ್ನಾಟಕ ೩೭೧(ಜೆ) ಕಲಂ ಕಾನೂನು ತಿದ್ದುಪಡಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಸೈಬಣ್ಣ ಜಮಾದಾರ ಆಗ್ರಹಿಸಿದರು. ಅಕ್ರಮಗಳ ಕುರಿತು ರಾಜ್ಯ ಸರ್ಕಾರ ಕಾಲ ಹರಣ ಮಾಡದೆ ಸಮಗ್ರ ತನಿಖೆ ನಡೆಸಬೇಕು. ತನಿಖೆಗೆ ವಹಿಸಿ ಎರಡು ವರ್ಷವಾಗುತ್ತಿದ್ದರೂ, ವರದಿ ಬಹಿರಂಗ ಪಡಿಸುತ್ತಿಲ್ಲ. ಅವ್ಯವಹಾರ ಮುಚ್ಚಿ ಹಾಕುವ ಕುತಂತ್ರ ನಡೆದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನ.೧೧ರಂದು ಕೆಕೆಆರ್‌ಡಿಬಿಯ ಅಕ್ರಮಗಳ ತನಿಖೆಗೆ ಪುನಃ ತನಿಖೆಗೆ ಆದೇಶಿದ್ದು, ಈ ಭಾಗದ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸವಾಗಿದೆ. ಕೆಕೆಆರ್‌ಡಿಬಿಯಲ್ಲಿ ೨೦೧೮ರಿಂದ ಇದುವರೆಗೆ ನಡೆದ ಸಮಗ್ರ ಅಕ್ರಮಗಳ ತನಿಖೆ ವಾರದೊಳಗೆ ಸಿಬಿಐಗೆ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಯಶವಂತರಾವ ಸೂರ್ಯವಂಶಿ, ವಿಜಯಕುಮಾರ ಮಠಪತಿ ಇದ್ದರು.