ಹಾಸನ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ನಗರದ ಚನ್ನಪಟ್ಟಣದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಗುರುವಾರ ಬೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಶೌಚಾಲಯದಲ್ಲಿ 10 ರೂ ಹೆಚ್ಚಿನ ಹಣ ವಸೂಲಿ, ಮಹಿಳೆಯರ ವಿಶ್ರಾಂತಿ ಗೃಹಕ್ಕೆ ಬೀಗ, ಅಂಗಡಿಗಳಲ್ಲಿ ಎಂ.ಆರ್.ಪಿ. ಗಿಂತ ಹೆಚ್ಚಿನ ಹಣ ಪಡೆಯುವುದರ ಬಗ್ಗೆ ತಿಳಿದು ಸ್ಥಳದಲ್ಲೆ ಗರಂ ಆಗಿ ಕೂಡಲೇ ಸರಿಪಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಯಾರಾದರೂ ಹೆಚ್ಚಿನ ಧರ ಕೇಳಿದರೇ ಪ್ರತಿಭಟಿಸಿ ಎಂದು ಕರೆ ಕೊಟ್ಟರು.
ನಗರದ ಚನ್ನಪಟ್ಟಣದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಖುದ್ಧಾಗಿ ಬಸ್ ಒಳಗೆ ಹೋಗಿ ಪ್ರಯಾಣಿಕರನ್ನು ಮಾತನಾಡಿಸಿ ಸಮಸ್ಯೆ ಆಲಿಸಿದರು. ಶೌಚಾಲಯದಲ್ಲಿ 10 ರೂ ಪಡೆಯುತ್ತಿರುವುದು, ಅಂಗಡಿಗಳಲ್ಲಿ ಹೆಚ್ಚಿನ ಬೆಲೆ ಪಡೆಯುತ್ತಿರುವ ಬಗ್ಗೆ ಪ್ರಯಾಣಿಕರು ಹೇಳಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ರಾಜ್ಯ ಉಪಾಧ್ಯಕ್ಷರಾಗಿ ಆದ ನಂತರ ಈ ರೀತಿ ವೀಕ್ಷಣೆ ಮಾಡುತ್ತಿರುತ್ತೇವೆ. ಪಂಚ ಗ್ಯಾರಂಟಿಗಳು ಅತ್ಯಂತ ಪ್ರಮುಖವಾದಂತಹ ಕಾರ್ಯಕ್ರಮವಾಗಿದ್ದು, ಬಸ್ ನಿಲ್ದಾಣದಿಂದ ಪ್ರಯಾಣ ಮಾಡುವಂತಹ ಮಹಿಳೆಯರ ಸ್ಥಿತಿಗತಿ, ಪ್ರಯಾಣ ಮಾಡುವಾಗ ಇನ್ನಿತರ ಸೌಲಭ್ಯ ನೋಡಲು ಬಂದಿದ್ದು, ಅವರಿಗೆ ಶಕ್ತಿ ಯಾವ ರೀತಿ ಕೊಡಲಾಗಿದೆ ಬಗ್ಗೆ ನೋಡಿದೆ. ಹಾಸನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಭೇಟಿ ಕೊಡಲಾಗಿದೆ. ಬಸ್ ನಿಲ್ದಾಣ ದೊಡ್ಡದಾಗಿ ಚನ್ನಾಗಿದೆ. ಶೌಚಾಲಯಕ್ಕೆ 3 ರೂ ಪಡೆಯಲು ಸೂಚಿಸಲಾಗಿದ್ದರೂ ಇಲ್ಲಿನ ಶೌಚಾಲಯದಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಒಬ್ಬರಿಗೆ 5 ರೂ ಅಲ್ಲ 10 ರೂ ಪಡೆಯುತ್ತಿರುವುದು ಕೇಳಿ ನನಗೆ ಬಹಳ ಬೇಸರವಾಗಿದೆ. ಉಚಿತ ಶೌಚಾಲಯ ಮಾಡಬೇಕು ಎನ್ನುವುದೇ ಉದ್ದೇಶವಾಗಿದೆ. ಸ್ವಚ್ಛತೆ ಗಾಗಿ ಮಾತ್ರ 3 ರೂಗಳನ್ನು ಪಡೆಯಲಾಗುತ್ತಿದೆ. ಅದಕ್ಕಿಂತ ಹೆಚ್ಚಿನ ಧರ ತೆಗೆದುಕೊಳ್ಳುತ್ತಿರುವುದು ಹಗಲು ದರೋಡೆ ಅನಿಸುತ್ತದೆ. ಈಗಾಗಲೇ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು, ಇಲ್ಲಿನ ಡಿಸಿಯವರು ಬರೀ ನೋಟಿಸ್ ಕೊಟ್ಟರೇ ಸಾಲದು. ಅವರ ಲೈಸೆನ್ಸ್ ರದ್ದು ಮಾಡಬೇಕು. ಅನೇಕ ಬಾರಿ ದೂರುಗಳು ಬಂದರೂ ಕೂಡ ಪ್ರಯೋಜನವಾಗಿಲ್ಲ. ಈ ಬಗ್ಗೆ ಕೂಡಲೇ ಕ್ರಮವಹಿಸಬೇಕು ಎಂದು ಸೂಚಿಸಿದರು.
ಇನ್ನು ಕೆ.ಎಸ್.ಆ.ರ್.ಟಿ.ಸಿ. ಬಸ್ ನಿಲ್ದಾಣದ ಒಳಗೆ ಇರುವ ಮಹಿಳೆಯರ ವಿಶ್ರಾಂತಿ ಹಾಗೂ ತಾಯಿ ಮಗು ಕೋಣೆ ಒಟ್ಟಿಗೆ ಇದ್ದು, ಆದರೇ ಸರಿಯಾದ ರೀತಿಯಲ್ಲಿ ಸದ್ಬಳಕೆ ಆಗದಿರುವುದು ದುರ್ದೈಯ. ಯಾವುದೇ ಸರ್ಕಾರವು ಬಂದು ಕಾರ್ಯಕ್ರಮ ಅನುಷ್ಠಾನಗೊಂಡಾಗ ಜನರಿಗೆ ಬಳಕೆ ಆಗಬೇಕೆಂದು ಜಾರಿ ಮಾಡಿರುತ್ತಾರೆ. ತಾಯಿ ಮಗುವಿಗೆ ಹಾಲುಣಿಸಲು, ಮಹಿಳೆಯರು ವಿಶ್ರಾಂತಿ ಪಡೆಯಲು ಮಾಡಿರುವ ಕೊಠಡಿಯಾಗಿದ್ದು, ಇಲ್ಲಿ ಆ ರೂಮಿನ ಬೀಗ ಹಾಕಲಾಗಿದೆ. ಇದರಿಂದ ಮಹಿಳೆಯರ ಸದ್ಬಳಕೆ ಆಗದಿರುವುದು ಬಹಳ ವಿಷಾದನಿಯವಾದುದ್ದು. ಮುಂದಿನ ದಿನಗಳಲ್ಲಿ ಜಾಗೃತಿ ಮೂಡಿಸಿ ಸರಿಪಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಕ್ತಿ ಯೋಜನೆ ಉಪಯೋಗವಾಗಿದ್ದು, ಸಾಕಷ್ಟು ರೀತಿ ಹಣ ಉಳಿತಾಯವನ್ನು ಹೆಣ್ಣು ಮಕ್ಕಳು ಮಾಡುತ್ತಿದ್ದಾರೆ. ಕೆ.ಎಸ್.ಆ.ರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಇರುವ ಅಂಗಡಿ ಮುಗ್ಗಟ್ಟುಗಳು ಎಂ.ಆರ್.ಪಿ. ದರದಲ್ಲಿ ವ್ಯಾಪಾರ ಮಾಡಬೇಕು. ಇಲ್ಲಿ ವಿಚಾರಿಸಿದಾಗ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಹೆಚ್ಚಿನ ಬೆಲೆಗೆ ವ್ಯಾಪಾರ ಮಾಡಿದರೇ ಅದು ಶಿಕ್ಷಾರ್ಹ ಅಪರಾಧ. ಅವರ ಮೇಲೆ ಕೇಸನ್ನು ದಾಖಲಿಸಿ ಸರಿಯಾದ ಕ್ರಮವನ್ನು ಕೈಗೊಳ್ಳಬೇಕು. ನಾವು ಇಲ್ಲಿ ಎಷ್ಟೆ ಭೇಟಿ ನೀಡಿದರೂ ನಿರಂತರವಾಗಿ ಅಪರಾಧ ಮಾಡುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು. ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು. ಇಲ್ಲಿ ಎಂ.ಆರ್.ಪಿ. ಗಿಂತ ಹೆಚ್ಚಿನ ಬೆಲೆ ಕೊಡಬಾರದು ಎಂದು ಎಲ್ಲಾ ಅಂಗಡಿ ಮುಂದೆ ಅಂಗಡಿ ಮಾಲೀಕರೇ ನಾಮ ಫಲಕ ಹಾಕಬೇಕು ಎಂದು ಇದೆ ಸಂದರ್ಭದಲ್ಲಿ ಸೂಚಿಸಿದರು. ನಮ್ಮ ಸೂಚನೆಗೂ ಮೀರಿ ಯಾರಾದರೂ ಹೆಚ್ಚಿನ ಬೆಲೆ ಸಂಗ್ರಹಿಸಿದರೇ ಕೂಡಲೇ ದೂರನ್ನು ಕೊಡಿ ಮತ್ತು ಸ್ಥಳದಲ್ಲೆ ಪ್ರತಿಭಟಿಸಿ ಎಂದು ಕರೆ ಕೊಟ್ಟರು. ಬಸ್ ನಿಲ್ದಾಣದಲ್ಲಿರುವ ಎಲ್.ಇ.ಡಿ. ಒಳಗೆ ಆರೋಗ್ಯ ಸ್ವಚ್ಛತೆ ಇತರೆ ಜಾಗೃತಿ ಮೂಡಿಸಲಾಗುವುದು ಎಂದರು.