ಬೆಳಗಾವಿ: ಇಲ್ಲಿನ ಕೆಎಲ್‌ಇ ವಿಶ್ವನಾಥ ಕತ್ತಿ ದಂತ ವಿಜ್ಞಾನ ಮಹಾವಿದ್ಯಾಲಯದ ಕ್ರೌನ್ ಮತ್ತು ಬ್ರಿಡ್ಜ್ ವಿಭಾಗದ ಉಪನ್ಯಾಸಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಬಾಗಲಕೋಟೆಯ ಪಿಎಂಎನ್‌ಎಂ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 8ನೇ ಇಂಡಿಯನ್ ಪ್ರೊಸ್ಟೊಡಾಂಟಿಕ್ಸ್ ಸೊಸೈಟಿಯ ರಾಜ್ಯ ವಾರ್ಷಿಕ ಸಮ್ಮೇಳನದಲ್ಲಿ ಸ್ಪರ್ದಿಸಿ ವಿವಿಧ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಉಪನ್ಯಾಸಕ ಡಾ.ಆದಿತ್ಯ ಆಚಾರ್ಯ ಅವರು, ಅಧ್ಯಾಪಕರ ಅತ್ಯುತ್ತಮ ವೈಜ್ಞಾನಿಕ ವಿಷಯ ಮಂಡನೆಯಲ್ಲಿ ಪ್ರಶಸ್ತಿ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಡಾ.ಸೋನಾಲ್ ಪರಬ್ ವೈಜ್ಞಾನಿಕ ಪ್ರಬಂಧ ಮಂಡನೆಯಲ್ಲಿ ಪ್ರಥಮ ಬಹುಮಾನ, ಡಾ.ಕರುಣಾ ಪಟವರ್ದನ್ ಮತ್ತು ಡಾ.ಯಾಮಿನ್ ಪರಾಗ್ ವೈಜ್ಞಾನಿಕ ಪೋಸ್ಟರ್ ಪ್ರಸ್ತುತಿಗಾಗಿ ಪ್ರಥಮ ಬಹುಮಾನ, ಡಾ.ನಿಶಾ ಪುರಾಣಿಕ್ ಮತ್ತು ಡಾ.ಶ್ರೇಯಾ ಚಿಂಡಕ್ ಟೇಬಲ್ ಕ್ಲಿನಿಕ್‌ನಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಪ್ರಾಧ್ಯಾಪಕ ಡಾ.ರಮೇಶ ನಾಯಕ 2 ವರ್ಷಗಳ ಆವಧಿಗೆ ಕರ್ನಾಟಕ ರಾಜ್ಯ ಪ್ರಾಸ್ಟೋಡಾಂಟಿಕ್ ಸದಸ್ಯರಾಗಿ ಆಯ್ಕೆಯಾದರು. ಸಮ್ಮೇಳನದಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದ ವಿವಿಧ ಕಾಲೇಜುಗಳಿಂದ 250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.