ಜಿಲ್ಲೆ

ಕೆಎಲ್‌ಇ ಹೋಮಿಯೋಪಥಿ ಆರೋಗ್ಯ ಶಿಬಿರ

ಧರ್ಮರಾಜ ರಾಮನಗೌಡ ಪಾಟೀಲ

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಗುರುವಾರ ಸಾಂಬ್ರಾ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.

ಸಮಾರಂಭದಲ್ಲಿ ಸ್ಥಳೀಯ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜು ದೇಸಾಯಿ, ಗ್ರಾಪಂ ಅಧ್ಯಕ್ಷೆ ರಚನಾ ಗೌಡರ, ಪಿಡಿಒ ಸಿದ್ಧಲಿಂಗ ಸರೂರ, ಸಮಾಜಸೇವಕ ವೈ.ಕೆ.ಧರ್ಮೋಜಿ, ಜ್ಯೋತಿ ಕಾಲೇಜ್ ನಿವೃತ್ತ ಪ್ರಾಂಶುಪಾಲ ಎ.ಎ.ೋರ್ಪಡೆ, ಕೆಎಲ್‌ಇ ಹೋಮಿಯೋಪಥಿಕ್ ಕಾಲೇಜಿನ ನಿರ್ದೇಶಕ ಡಾ.ಎಂ.ಎ.ಉಡಚನಕರ, ಆರೋಗ್ಯ ಶಿಬಿರದ ಮುಖ್ಯಸ್ಥ ಡಾ.ಚೇತನ ಇದ್ದರು.

ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಜತೆಗೆ ಮನೆ ಬಾಗಿಲಿಗೆ ಹೋಮಿಯೋಪಥಿ ಚಿಕಿತ್ಸೆ ಸೌಲಭ್ಯ ಒದಗಿಸಲು ಶಿಬಿರ ಏರ್ಪಡಿಸಿದ್ದಾಗಿ ತಿಳಿಸಿದರು.