ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪಿಎಸೈ ಲಿಂಗರಾಜು ನೇತೃತ್ವದಲ್ಲಿ ದಲಿತರಿಗೊಂದು ದಿನ ಕಾರ್ಯಕ್ರಮ ನಡೆಯಿತು. 
ಜಿಲ್ಲೆ

ಕೆಆರ್‌ಎಸ್ ಠಾಣೆಯಲ್ಲಿ ‘ದಲಿತರಿಗೊಂದು ದಿನ’

ಕೆ.ಆರ್.ಸಾಗರ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ‘ದಲಿತರಿಗೊಂದು ದಿನ’ ಕಾರ್ಯಕ್ರಮದಲ್ಲಿ ದಲಿತ ಮುಖಂಡರು ಭಾಗವಹಿಸಿದ್ದರು.

ಪಿಎಸೈ ಲಿಂಗರಾಜು ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ಗ್ರಾಮಗಳ ದಲಿತ ಮುಖಂಡರು ತಮ್ಮ ಊರಿನಲ್ಲಿ ಸಮುದಾಯದವರಿಗೆ ಆಗುತ್ತಿರುವ ತೊಂದರೆಗಳ ಕುರಿತು ವಿವರಣೆ ನೀಡಿದರು.

ಪಿಎಸೈ ಲಿಂಗರಾಜು ಮಾತನಾಡಿ, ಅವಹೇಳನ ಹಾಗೂ ತೊಂದರೆ ಉಂಟಾದರೆ ತಕ್ಷಣ ಮಾಹಿತಿ ನೀಡಬೇಕು. ಆಗ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶವಿರುತ್ತದೆ ಎಂದರು.

ಕ್ರೈಂ ಪಿಎಸೈ ಶಾಂತರಾಜು, ಕೆ.ಆರ್.ಸಾಗರ ಗ್ರಾ.ಪಂ ಅಧ್ಯಕ್ಷ ಕೆ.ನರಸಿಂಹ, ದಲಿತ ಮುಖಂಡರಾದ ಅಂಕಯ್ಯ, ನಾಗರಾಜು, ನಾಗೇಶ್, ದಿನೇಶ್, ಮೂರ್ತಿ, ಸೋಮಶೇಖರ್ ಇತರರು ಇದ್ದರು.