ಜಿಲ್ಲೆ

ಕೆಆರ್‌ಎಸ್ ಒಳಹರಿವಿನಲ್ಲಿ ಇಳಿಮುಖ

ಕೆ.ಆರ್.ಸಾಗರ: ಕಳೆದ ಹಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದ ಕಾರಣ ಕೆಆರ್‌ಎಸ್‌ಗೆ ಪ್ರತಿ ದಿನ ಸರಾಸರಿ 45-50 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಹೀಗಾಗಿ ಒಂಬತ್ತು ದಿನಗಳಲ್ಲಿ ಒಟ್ಟು 22 ಅಡಿಯಷ್ಟು ನೀರನಮಟ್ಟ ಅಣೆಕಟ್ಟೆಯಲ್ಲಿ ಏರಿಕೆ ಕಂಡಿತ್ತು.


ಇದೇ ರೀತಿ ಮಳೆ ಮುಂದುವರೆದರೆ ಅಣೆಕಟ್ಟೆ ಗರಿಷ್ಠ ಮಟ್ಟ 124.80 ತಲುಪಲಿದೆ ಎಂದ ಆಶದಾಯಕವಾಗಿತ್ತು. ಆದರೆ ಕಳೆದೆರಡು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಶುಕ್ರವಾರ 33 ಸಾವಿರ ಕ್ಯೂಸೆಕ್ ಇದ್ದ ಒಳಹರಿವು ಶನಿವಾರ ಸಂಜೆ ದಿಢೀರನೇ 14 ಸಾವಿರ ಕ್ಯೂಸೆಕ್‌ಗೆ ಕುಸಿದಿದೆ. ಹೊರ ಹರಿವು 3144 ಕ್ಯಸೆಕ್, ಮತ್ತು 33.779 ಟಿ.ಎಂ.ಸಿ ನೀರಿನ ಸಂಗ್ರಹವಿದೆ.