ಜಿಲ್ಲೆ

ಕೆಂಭಾವಿ ಪುರಸಭೆಗೆ ಯೋಜನಾ ನಿರ್ದೇಶಕರ ಭೇಟಿ

ಕೆಂಭಾವಿ: ಸರ್ಕಾರಿ ರಜಾ ದಿನವಾದ ಭಾನುವಾರ ಪಟ್ಟದ ಪುರಸಭೆ ಕಚೇರಿಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಲಕ್ಷ್ಮೀಕಾಂತ ದಿಢೀರ್ ಭೇಟಿ ನೀಡಿರುವುದು ಹಲವು ಚರ್ಚೆಗೆ ಗ್ರಾಸವಾಗಿದೆ.

ಸರಿಯಾದ ಸಮಯಕ್ಕೆ ಬಾರದ ಸಿಬ್ಬಂದಿ, ಬಂದವರು ಸಹ ಸಾರ್ವಜನಿಕರ ಕೆಲಸ ಮಾಡದೆ ಇರುವ ಅಪವಾದ, ಕೆಲವೊಂದಿಷ್ಟು ಅವ್ಯವಹಾರದ ಬಗ್ಗೆ ದೂರು ಸೇರಿ ಹಲವು ಸಮಸ್ಯೆಗಳ ಆಗರವಾಗಿರುವ ಕೆಂಭಾವಿ ಪುರಸಭೆ ಕಚೇರಿಗೆ ಯೋಜನಾ ನಿರ್ದೇಶಕರು ರಜಾ ದಿನದಲ್ಲಿ ಬಂದು ಹೋಗಿದ್ದು, ಯಾಕೆ ?ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ಕೆಲಸದ ವೇಳೆ ಬಂದು ಇರುವ ಸಮಸ್ಯೆ ಅರಿಯಬೇಕಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾನುವಾರದ ದಿನ ಬಂದು ಹೋಗಲು ಏನು ? ಕಾರಣ. ಹಾಗಾದರೆ ಸಾರ್ವಜನಿಕ ಸಮಸ್ಯೆ ಕೇಳುವುದು ಬಿಟ್ಟು ಬರೀ ಅಧಿಕಾರಿಗಳ ಪೈಲ್‌ಚೆಕ್ ಮಾಡಲು ಮಾತ್ರ ಇವರು ಇರುವುದಾ, ರಜಾ ದಿನದಲ್ಲಿ ಬಂದರೆ ಅಧಿಕಾರಿಗಳು ಸಿಬ್ಬಂದಿ ಇರುತ್ತಾರಾ ಎಂಬಿತ್ಯಾದಿ ಅನುಮಾನಗಳು ಎಲ್ಲರನ್ನು ಕಾಡಲಾರಂಭಿಸಿವೆ.

ಈ ಭಾನುವಾರದ ಭೇಟಿ ಬಗ್ಗೆ ಯೋಜನಾ ನಿರ್ದೇಶಕರನ್ನು ಕೇಳಿದಾಗ ಎಬಿ ಖಾತಾ ಅಭಿಯಾನದ ಬಗ್ಗೆ ಪರಿಶೀಲನೆಗೆ ಬಂದಿರುವುದಾಗಿ ತಿಳಿಸಿದ್ದು ಇದು ಸತ್ಯವಾದರೂ ಇದರ ಹಿಂದೆ ಇರುವ ಹಲವು ಅನುಮಾನಗಳು ಎದ್ದು ಕಾಣುತ್ತಿವೆ.