ಕೆಂಭಾವಿ: ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಂಭಾವಿ ತಾಲೂಕು ಕೇಂದ್ರವನ್ನಾಗಿ ಘೋಷಿಸುವ ಭರವಸೆ ಹುಸಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಕೆಂಭಾವಿ ತಾಲೂಕು ಕೇಂದ್ರ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ತಾಲೂಕು ಕೇಂದ್ರದ ಕೂಗು ಕೇವಲ ಹೋರಾಟಕ್ಕೆ ಸೀಮಿತವಾಗಿರುವುದು ಸ್ಥಳೀಯರಿಗೆ ಮತ್ತಷ್ಟು ಬೇಸರ ತರಿಸಿದೆ.
ಯಾದಗಿರಿ ಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರವಾಗಿರುವ ಕೆಂಭಾವಿಯನ್ನು ತಾಲೂಕು ಕೇಂದ್ರ ಮಾಡದೆ ಸರ್ಕಾರ ಮತ್ತೆ ನಿರ್ಲಕ್ಷÈ ವಹಿಸಿದೆ ಎಂಬ ಮಾತು ಜನರಿಂದ ಕೇಳಿಬರುತ್ತಿವೆ.
೧೯೭೪ರ ವರದಿಯಂತೆ ಕೆಂಭಾವಿ ತಾಲೂಕು ಕೇಂದ್ರ ಘೋಷಿಸುವಂತೆ ವಾಸುದೇವರಾವ ಸಮಿತಿ ಶಿಫಾರಸು ಮಾಡಿತ್ತು. ಅದರಂತೆ ಪಟ್ಟಣ ವ್ಯಾಪ್ತಿಯ ಸುಮಾರು ೧೪ ಗ್ರಾಮ ಪಂಚಾಯಿತಿ ಕೇಂದ್ರಗಳನ್ನು ಒಟ್ಟುಗೂಡಿಸಿ ೬೩ ಹಳ್ಳಿಗಳೊಂದಿಗೆ ಈ ಪಟ್ಟಣ ತಾಲೂಕು ಕೇಂದ್ರವಾಗಿಸುವAತೆ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು. ಇದಲ್ಲದೆ ಎಂ.ಬಿ. ಪ್ರಕಾಶ್, ಹುಂಡೇಕಾರ ನೇತೃತ್ವದ ಸಮಿತಿಗಳು ಕೂಡ ಶಿಫಾರಸು ಮಾಡಿದ್ದವು. ಆದರೆ ಇದಾವುದನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷಿಸಿದೆ ಎಂಬುದು ಸಾರ್ವಜನಿಕ ಆರೋಪವಾಗಿದೆ.