ಜಿಲ್ಲೆ

ಕೆಂಪೇಗೌಡರ 514ನೇ ಜಯಂತಿ ಸರಳ ಆಚರಣೆ

ಕೊಳ್ಳೇಗಾಲ: ತಾಲೂಕು ಕಚೇರಿಯಲ್ಲಿ ಮಂಗಳವಾರ ತಾಲೂಕು ಆಡಳಿತ ವತಿಯಿಂದ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.


ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಉಪವಿಭಾಗಾಧಿಕಾರಿ ಗೀತಾ ಹುಡೇದ್ ಅವರು ಪುಷ್ಪನಮನ ಸಲ್ಲಿಸಿ ಮಾತನಾಡಿ, ಅಂದಿನ ಬೆಂದಕಾಳೂರು, ಬೆಂಗಳೂರಾಗಿ ಇಂದು ಸಿಲಿಕಾನ್ ಸಿಟಿಯಾಗಲು ಕೆಂಪೇಗೌಡರೇ ಕಾರಣ. ಅದಕ್ಕಾಗಿಯೇ ಅವರನ್ನು ಬೆಂಗಳೂರಿನ ನಿರ್ಮಾತೃ ಎನ್ನುತ್ತೇವೆ. ಅಂದೇ ರೈತರ ಉಪಯೋಗಕ್ಕಾಗಿ ಕೆರೆ ನಿರ್ಮಾಣ, ಕೃಷಿ ಮಾರುಕಟ್ಟೆ ನಿರ್ಮಿಸುವ ಮೂಲಕ ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ಪುರುಷ ಕೆಂಪೇಗೌಡರು ಎಂದು ಸ್ಮರಿಸಿದರು.

ತಹಸೀಲ್ದಾರ್ ಮಂಜುಳಾ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಬಿಇಒ ಚಂದ್ರಪಾಟೀಲ್, ಸಿಡಿಪಿಒ ನಾಗೇಶ್, ಸಮಾಜ ಕಲ್ಯಾಣಾಧಿಕಾರಿ ಗಂಗಾಧರ್, ಶಿರೆಸ್ತೇದಾರ್ ಶ್ರೀನಿವಾಸ್, ಚುನಾವಣಾ ಶಿರಸ್ತೇದಾರ್ ಕೃಪಾಕರ್, ಕಾರ್ಯಕ್ರಮ ವಿಷಯ ನಿರ್ವಾಹಕ ಶ್ರೀಧರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಜೇಗೌಡ, ಕಾರ್ಯದರ್ಶಿ ಬಸವೇಗೌಡ, ಶಿವಮಲ್ಲೇಗೌಡ ಇತರರು ಇದ್ದರು.