ಸೋಮವಾರಪೇಟೆ ಸಮೀಪದ ಕೆಂಚಮ್ಮನಬಾಣೆಯ ಬಲಮುರಿ ಗಣಪತಿ ದೇವಾಲಯದ ವಾರ್ಷಿಕ ಪೂಜೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು  
ಜಿಲ್ಲೆ

ಕೆಂಚಮ್ಮನಬಾಣೆ ಗಣಪತಿಗೆ ವಾರ್ಷಿಕ ಪೂಜೆ

ಸೋಮವಾರಪೇಟೆ: ಕೆಂಚಮ್ಮನಬಾಣೆಯ ಶ್ರೀ ಬಲಮುರಿ ಗಣಪತಿ ದೇವಾಲಯದ 21ನೇ ವಾರ್ಷಿಕ ಪೂಜೋತ್ಸವ ಶನಿವಾರ ರಾತ್ರಿ ನಡೆಯಿತು.

ಪೂಜೋತ್ಸವದ ಅಂಗವಾಗಿ ದೇವಾಲದಲ್ಲಿ ಕಳಶಾರಾಧನೆ, ಪಂಚಾಮೃತಾಭಿಷೇಕ, ಗಣಹೋಮಗಳು ಪ್ರಧಾನ ಅರ್ಚಕ ಶ್ರೀನಿವಾಸ್ ಶರ್ಮ ಅವರ ಪೌರೋಹಿತ್ಯದಲ್ಲಿ ನಡೆದವು. ಉತ್ಸವದ ಪ್ರಯುಕ್ತ ಗ್ರಾಮದ ಪ್ರತಿ ಬೀದಿಯಲ್ಲಿ ಚಾಮರಾಜನಗರದ ವೀರಭದ್ರೇಶ್ವರ ಕಲಾತಂಡದಿಂದ ವೀರಗಾಸೆ ಪ್ರದರ್ಶನ ನಡೆಯಿತು.

ಶಾಸಕ ಡಾ.ಮಂತರ್‌ಗೌಡ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ದಾನಿಗಳಾದ ಗುಡುಗೂರಿನ ಡಾ. ವೇಣುಗೋಪಾಲ್, ಮಧುವನ ಎಸ್ಟೇಟ್‌ನ ಮಧುಕರ್ ಭಟ್, ಪಾಲಿಗದ್ದೆ ಎಸ್ಟೇಟ್‌ನ ಎಚ್.ಪ್ರಸಾದ್, ಬೇಳೂರು ಎಸ್ಟೇಟ್‌ನ ರಾಣಿ ಪ್ರತಾಪ್ ಅವರನ್ನು ಗೌರವಿಸಲಾಯಿತು.
ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಪಿ.ಸೋಮಶೇಖರ್, ಪದಾಧಿಕಾರಿಗಳಾದ ಕೆ.ಎಸ್.ಪ್ರತಾಪ್, ಪಿ.ಈ.ಸುರೇಶ್, ಕೆ.ಬಿ.ರಮೇಶ್, ಬಿ.ಆರ್. ರವಿ., ಎಂ.ಆರ್. ವಿಶ್ವನಾಥ್, ಕೆ.ಆರ್ ಶಿವಕುಮಾರ್ ಇದ್ದರು.