ಕೆ.ಆರ್. ಸಾಗರ: ಕಡೇ ಕಾರ್ತಿಕದ ಅಂಗವಾಗಿ ಸೋಮವಾರ ರಾತ್ರಿ ಕೆ.ಆರ್. ಸಾಗರ ಗ್ರಾಮದ ಅರಳಿಕಟ್ಟೆಯಲ್ಲಿ ಕಡೆಲೆ ಪುರಿ ಪರಿಷೆ ನಡೆಯಿತು.
ಅರ್ಚಕ ಮರಿಯಪ್ಪ ಮತ್ತು ಗಣೇಶ ಅವರು ಅರಳಿಕಟ್ಟೆಯಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಕ್ತರು ತಂದಿದ್ದ ಹಣ್ಣು-ಕಾಯಿಗಳನ್ನು ದೇವರಿಗೆ ಸಮರ್ಪಣೆ ಮಾಡಿ ಉೇ ಉೇ ಮಾದಪ್ಪ ಎಂದು ಘೋಷಣೆ ಕೂಗಿ ಕಡಲೆಪುರಿ ರಾಶಿಗೆ ಪೂಜೆ ಮಾಡಿದರು. ಯಾವುದೇ ಜಾತಿ ಭೇದವಿಲ್ಲದೆ ಗ್ರಾಮದ ಹಿರಿಯರು, ಮುಖಂಡರೆಲ್ಲರೂ ಭಾಗವಹಿಸಿದ್ದರು. ಪೂಜೆ ಸಲ್ಲಿಸಿದ ಕಡೆಲೆಪುರಿ ರಾಶಿಯಿಂದ ನೂರಾರು ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಯಿತು.