ಬಾಗಲಕೋಟೆ: ದಶಕಗಳ ಕಾಲ ಬರಗಾಲ, ಗುಳೇದಂತಹ ಸಮಸ್ಯೆಗಳಲ್ಲಿ ಬದುಕು ಹೈರಾಣ ಆಗಿಸಿದೆ. ಕೃಷ್ಣೆಯೇ ನಮ್ಮ ಬದುಕು, ಉಸಿರು. ನಾವೇನು ಪಾಪ ಮಾಡಿದ್ದೇವೆ. ಕೃಷ್ಣಾ ಕೊಳ್ಳದ ಬಗ್ಗೆ ತಮಗೆ ಕೋಪವೇಕೆ. ನಾವೇನು ಮಲತಾಯಿ ಮಕ್ಕಳೇನು...!
ಬಾಗಲಕೋಟೆ ನಗರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನಾ ಬಾಽತ ಸಂತ್ರಸ್ತರ ಹೋರಾಟದಲ್ಲಿ ಭಾಗವಹಿಸಿದ್ದ ನೂರಾರು ವಿದ್ಯಾರ್ಥಿಗಳು ಈವರೆಗೆ ಆಳ್ವಿಕೆ ನಡೆಸಿದ ಸರ್ಕಾರಗಳನ್ನು ಪ್ರಶ್ನೆಗಳ ಸುರಿಮಳೇ ಗೈಯುತ್ತಲೆ ಕಿವಿ ಹಿಂಡುವ ಪ್ರಶ್ನೆ ಮಾಡಿದರು. ನಮ್ಮ ಬಾಗಲಕೋಟೆ-ವಿಜಯಪುರ ಜಿಲ್ಲೆಯ ಜನ ಅಗತ್ಯಕ್ಕಿಂತ ಹೆಚ್ಚೇನು ಕೇಳಿಲ್ಲ. ತ್ಯಾಗ, ಪರಿಶ್ರಮಕ್ಕೆ ತಿರುಗೊ ನೋಡಿ. ಹೋರಾಟದಲ್ಲಿಯೇ ನಮ್ಮ ಕಾಲ ಹರಣ ಮಾಡಬೇಡಿ ಅಂತ ಕೋರಿದರು.
ವಾಗ್ದೇವಿ ಪದವಿ ಪೂರ್ವ ಕಾಲೇಜು, ಪ್ರಾರ್ಥನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎನ್‌ಎಸ್‌ಐಯು ನೇತೃತ್ವದಲ್ಲಿ ಕಾಳಿದಾಸ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬೈಪಾಸ್ ರಸ್ತೆ ಮೂಲಕ ಹೋರಾಟದ ಸ್ಥಳ ತಲುಪಿತು. ವೇದಿಕೆ ಹಾಗೂ ಆಸನಗಳಲ್ಲಿ ಭರಪೂರ ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳು ಸರ್ಕಾರ, ಜನ ಪ್ರತಿನಿಽಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.