ಬಸವಸಾಗರ ಜಲಾಶಯ ಭರ್ತಿಯಾಗಿರುವುದು. 
ಜಿಲ್ಲೆ

ಕೃಷ್ಣೆಗೆ ಹೆಚ್ಚುತ್ತಿರುವ ಪ್ರವಾಹ

ಕೊಡೇಕಲ್: ಮಹಾರಾಷ್ಟçದಲ್ಲಿ ನಿರಂತರ ಮಳೆಯಿಂದಾಗಿ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಗುರುವಾರ 22 ಕ್ರಸ್ಟ್ಗೇಟ್‌ಗಳ ಮೂಲಕ 69 ಸಾವಿರ ಕ್ಯೂಸೆಕ್ ನೀರು ಗುರುವಾರ ಕೃಷ್ಣಾ ನದಿಗೆ ಹರಿಬಿಡಲಾಯಿತು.

ವಾರದಿಂದ ಒಳಹರಿವಿನಲ್ಲಿ ಕ್ರಮೇಣ ಹೆಚ್ಚಾಗುತ್ತಿರುವುದರಿಂದ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ತನ್ನ ಸಾಮರ್ಥ್ಯದ ನೀರು ಕಾಯ್ದುಕೊಂಡು ಹೆಚ್ಚಿನ ನೀರನ್ನು ಬುಧವಾರ 62 ಸಾವಿರ ಮತ್ತು ಗುರುವಾರ 69 ಸಾವಿರ ಕ್ಯೂಸೆಕ್ ಹರಿಬಿಡಲಾಗಿದೆ. ಕೃಷ್ಣೆಗೆ ಪ್ರವಾಹ ಹೆಚ್ಚಾಗಿದ್ದು, ನದಿ ತೀರದ ಜನರು ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.

ಮಹಾರಾಷ್ಟç ರಾಜ್ಯ ಸೇರಿ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದ್ದರಿAದ ಆಲಮಟ್ಟಿಯ ಲಾಲ್ ಬಹಾದೂರ್ ಶಾಸ್ತಿç ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಹೀಗಾಗಿ ಹೆಚ್ಚುವರಿ ನೀರು ಬಸವಸಾಗರಕ್ಕೆ ಹರಿಬಿಡುತ್ತಿರುವುದರಿಂದ ಜಲಾಶಯ ಭರ್ತಿಯಾಗಿದೆ.

ಬುಧವಾರ ರಾತ್ರಿ 51,250 ಕ್ಯೂಸೆಕ್ ಒಳಹರಿವಿನಿಂದ 33.313 ಟಿಎಂಸಿ ಸಾಮರ್ಥ್ಯದ ಬಸವಸಾಗರದಲ್ಲಿ ಸಂಗ್ರಹ ಮಟ್ಟ ದಿಢೀರ್ ಹೆಚ್ಚಿದೆ. ಜಲಾಶಯದಲ್ಲಿ ಸದ್ಯ 31.010 ಟಿಎಂಸಿ ನೀರಿದ್ದು, ಗರಿಷ್ಠ 492.252 ಮೀ. ಸಾಮರ್ಥ್ಯದ ಜಲಾಶಯ ನೀರಿನ ಮಟ್ಟ 491.75 ಮೀಗೆ ತಲುಪಿದೆ.
22 ಕ್ರಸ್ಟ್ಗೇಟ್‌ಗಳ ಮೂಲಕ ಧುಮ್ಮಿಕ್ಕುತ್ತಿರುವ ಕೃಷ್ಣೆಯ ಸೊಬಗು ನೋಡಲು ಎರಡು ಕಣ್ಣು ಸಾಲದಂತಿದೆ. ಗೇಟ್‌ಗಳಿಗೆ ಅಳವಡಿಸಿದ್ದ ಬಣ್ಣ ಬಣ್ಣ ವಿದ್ಯುತ್ ದೀಪಗಳಿಂದ ಕಂಗೊಳಿಸುವ ನೀರಿನ ರಭಸ ನೋಡುವುದೇ ಒಂದು ಖುಷಿ. ಇದನ್ನು ಕಣ್ತುಂಬಿಕೊಳ್ಳಲು ಜಲಾಶಯದತ್ತ ಪ್ರವಾಸಿಗರ ದಂಡು ಹರಿದುಬರುತ್ತಿದೆ.

ಒಟ್ಟಾರೆ ಬರಿದಾಗಿದ್ದ ಬಸವಸಾಗರ ಭರ್ತಿಯಾಗಿದ್ದರಿಂದ ಜೀವಕಳೆ ಬಂದAತಾಗಿದೆ. ಈ ಭಾಗದಲ್ಲಿ ಅಷ್ಟೊಂದು ಮಳೆಯಾಗದಿದ್ದರೂ ಕೋಯ್ನಾದಿಂದ ಬಂದ ನೀರಿನಿಂದಾಗಿ ಕೃಷ್ಣೆ ಭೋರ್ಗರೆಯುತ್ತಿದ್ದಾಳೆ. ಜಲಾಶಯ ಕೆಳಭಾಗದ ಶ್ರೀ ಛಾಯಾ ಭಗವತಿ ದೇವಸ್ಥಾನದ ಕೆಳ ಮೆಟ್ಟಿಲುಗಳಿಗೆ ನೀರು ಸ್ಪರ್ಶಿಸುತ್ತಿದೆ.

ನದಿ ತೀರದ ಹಳ್ಳಿಗರಿಗೆ ಎಚ್ಚರಿಕೆ: ಜಲಾಶಯ ಭರ್ತಿಯಾದ ಕಾರಣ ಹೆಚ್ಚುವರಿ ನೀರು ನದಿಗೆ ಹರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಒಳಹರಿವು ಹೆಚ್ಚಾಗುವ ಸಾಧ್ಯತೆ ಇದ್ದುದರಿಂದ ನದಿ ತೀರದ ಹಳ್ಳಿಗರು ತಮ್ಮ ಸರಕು ಸಾಮಗ್ರಿ ಮತ್ತು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಗ್ರಾಮ ಪಂಚಾಯಿತಿಯಿAದ ಡಂಗೂರ ಸಾರಲಾಗಿದೆ.