ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದ ಬಳಿ ದೂಧಗಂಗಾ ನದಿ ನೀರು ಹೊಲ-ಗದ್ದೆಗಳಿಗೆ ನುಗ್ಗಿದ್ದರಿಂದ ಸಮೀಪದ ಪಶು ಚಿಕಿತ್ಸಾಲಯ ಹಾಗೂ ದೇವಸ್ಥಾನ ಜಲಾವೃತಗೊಂಡಿರುವುದು. 
ಜಿಲ್ಲೆ

ಕೃಷ್ಣಾ ತೀರದಲ್ಲಿ ವರುಣ ತಾಂಡವ

ಕೃಷ್ಣಾ, ತೀರದಲ್ಲಿ, ವರುಣ, ತಾಂಡವ, ಉಕ್ಕಿ, ಹರಿಯುತ್ತಿವೆ, ನದಿಗಳು, ಹೈ, ಅಲರ್ಟ್, ಘೋಷಣೆ, ಮಂಜುಗಡ್ಡೆಯಂತಾದ, ವಾತಾವರಣ, ಚಿಕ್ಕೋಡಿ, ಬೆಳಗಾವಿ, Krishna, Shore, Varuna, Tandava, Overflow, Flowing, Rivers, High, Alert, Declaration, Foggy, Weather, chikodi, Belagavi

ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ಹಾಗೂ ಉಪ ನದಿಗಳಾದ ವೇದಗಂಗಾ ಹಾಗೂ ದೂಧಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಡಳಿತ ನದಿಪಾತ್ರದಲ್ಲಿ ಹೈ-ಅಲರ್ಟ್ ಘೋಷಣೆ ಮಾಡಿದ್ದು, ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ವೇದಗಂಗಾ ಹಾಗೂ ದೂಧಗಂಗಾ ನದಿಯಿಂದ 34,320 ಕ್ಯೂಸೆಕ್ ಹಾಗೂ ರಾಜಾಪುರ ಬ್ಯಾರೇಜ್‌ನಿಂದ 1,21,785 ಕ್ಯೂಸೆಕ್ ಸೇರಿ ಕೃಷ್ಣಾ ನದಿಗೆ 1,56,195 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರಲಾರಂಭಿಸಿದೆ. ಪಂಚಗಂಗಾ ನದಿ ಮೂಲಕಸುಮಾರು 30 ಸಾವಿರ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 80 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಬರುತ್ತಿದೆ.

9 ಸೇತುವೆ ಜಲಾವೃತ: ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಯ ಕಲ್ಲೋಳ-ಯಡೂರ, ದೂಧಗಂಗಾ ನದಿಯ ಮಲಿಕವಾಡ-ದತ್ತವಾಡ, ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ, ವೇದಗಂಗಾ ನದಿಯ ಜತ್ರಾಟ-ಭಿವಶಿ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಕುನ್ನೂರ, ಹುನ್ನರಗಿ- ಮಮದಾಪುರ, ಸದಲಗಾ-ಬೋರಗಾವ ಹಾಗೂ ರಾಷ್ಟ್ರೀಯ ಹೆದ್ದಾರಿ-4ರ ನಿಪ್ಪಾಣಿ ಬಳಿ ಇರುವ ಯಮಗರ್ಣಿ ಸೇತುವೆ ಮಳೆಯಿಂದಾಗಿ ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡಿದೆ. ಕೃಷಿ ಭೂಮಿಗೂ ನೀರು ನುಗ್ಗಿದ್ದು, ನೀರಾವರಿ ಪಂಪ್‌ಸೆಟ್‌ಗಳು ಮುಳುಗಿವೆ. ದೇವಸ್ಥಾನಗಳೂ ಜಲಾವೃತಗೊಂಡಿವೆ. ಹಿಪ್ಪರಗಿ ಬ್ಯಾರೇಜ್‌ನಿಂದ 1,12 ಲಕ್ಷ ಕ್ಯೂಸೆಕ್ ನೀರು ಆಲಮಟ್ಟಿ ಜಲಾಶಯಕ್ಕೆ ಹಾಗೂ ಆಲಮಟ್ಟಿಯಿಂದ 1,70 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಯುಕೇಶಕುಮಾರ ಮಾಹಿತಿ ನೀಡಿದ್ದಾರೆ.