ಅರಕಲಗೂಡು ತಾಲೂಕು ಕೊಣನೂರಿನ ಶ್ರೀ ಕೊಳಲು ಗೋಪಾಲಕೃಷ್ಣಸ್ವಾಮಿ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಬೆಣ್ಣೆ ಕೃಷ್ಣನಿಗೆ ತೊಟ್ಟಿಲು ಸೇವೆ ನೆರವೇರಿಸಲಾಯಿತು. 
ಜಿಲ್ಲೆ

ಕೃಷ್ಣನಿಗೆ ತೊಟ್ಟಿಲು ಸೇವೆ

ಅರಕಲಗೂಡು: ತಾಲೂಕಿನ ಕೊಣನೂರಿನಲ್ಲಿ ಪುರಾಣ ಪ್ರಸಿದ್ಧ ಶ್ರೀ ಕೊಳಲು ಗೋಪಾಲಕೃಷ್ಣಸ್ವಾಮಿ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಬೆಳಗ್ಗೆಯಿಂದ ಸಂಜೆಯವರೆಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೊಳಲು ಗೋಪಾಲಕೃಷ್ಣಸ್ವಾಮಿಯ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ ನಡೆಸಿ ಮೊಗ್ಗಿನ ಅಲಂಕಾರ ಮಾಡಲಾಯಿತು. ನಂತರ ಬೆಣ್ಣೆ ಕೃಷ್ಣನಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ, ತೊಟ್ಟಿಲು ಸೇವೆ ಸಮರ್ಪಿಸಲಾಯಿತು. ದೇವರಿಗೆ ಷೋಡಷೋಪಚಾರ, ಮಹಾಮಂಗಳಾರತಿ ಮಾಡಿ ಭಕ್ತಿ ಸಮರ್ಪಿಸಿದರು.

ಕೊಳಲು ಗೋಪಾಲಕೃಷ್ಣಸ್ವಾಮಿ ದೇವರ ಮೂಲಮೂರ್ತಿಗೆ ಮಾಡಿದ್ದ ಮೊಗ್ಗಿನ ಆಲಂಕಾರ ಗಮನ ಸೆಳೆಯಿತು. ಕೊಣನೂರು ಸೇರಿದಂತೆ ಸುತ್ತಮುತ್ತಲ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.