ಜಿಲ್ಲೆ

ಕೃಷ್ಣನ ಸಂದೇಶ ಪ್ರತಿಯೊಬ್ಬರೂ ಪಾಲಿಸಿ

ಕಲಬುರಗಿ: ಶ್ರೀ ಕೃಷ್ಣ ನೀಡಿದ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಅನಿರುದ್ಧ ಶ್ರವಣ್ ಹೇಳಿದರು.


ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಶ್ರೀಕೃಷ್ಣ ಪರಮಾತ್ಮ ಅವತಾರ ಪುರುಷನಾಗಿದ್ದು, ಜಗತ್ತಿಗೆ ಶ್ರೇಷ್ಠ ಸಂದೇಶ ನೀಡಿದ್ದಾನೆ. ಕೃಷ್ಣನನ್ನು ನೆನೆದಾಗ ಬದುಕಿನ ಕಷ್ಟಗಳೆಲ್ಲವೂ ಮಾಯವಾಗುತ್ತವೆ ಎಂದರು.

ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಗುರುಮಧ್ವಾಚಾರ್ಯ ನವಲಿ ವಿಶೇಷ ಉಪನ್ಯಾಸ ನೀಡಿದರು.
ಐಪಿಎಸ್ ಅಧಿಕಾರಿ ಇಶಾ ಪಂತ್, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರವಿ ಉದನೂರು, ಪ್ರಮುಖರಾದ ಎಸ್.ಎಸ್.ಕುಲಕರ್ಣಿ, ಆರ್.ಆರ್.ಯಾದವ್, ಕಲ್ಲಪ್ಪ ಯಾದವ್, ಪದ್ಮಾಕರ ಚಿಂಚೋಳಿ, ಗೋವಿಂದಪ್ಪ ಸೇಡಂ, ಮಲ್ಲಿಕಾರ್ಜುನ ಉದನೂರು, ತುಕಾರಾಮ ಚಿತ್ತಾಪುರ ಇತರರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಣೆ ಮಾಡಿದರು.