ಯಾದಗಿರಿ: ವಿಷ್ಣುವಿನ ದಶಾವತಾರದಲ್ಲಿ ಕೃಷ್ಣನ ಅವತಾರವೂ ಒಂದಾಗಿದೆ. ಅಧರ್ಮ ಹೆಚ್ಚಾದಾಗ ಧರ್ಮ ಕಾಪಾಡಲು, ದುಷ್ಟರ ಸಂಹಾರಕ್ಕೆ ಹಾಗೂ ಶಿಷ್ಟರ ರಕ್ಷ ಣೆಗೆ ಶ್ರೀಕೃಷ್ಣ ಅವತರಿಸಿದ ಎಂದು ಚರಿತ್ರೆಯಿಂದ ತಿಳಿಯುತ್ತೇವೆ ಸಕರ್ಾರಿ ಪದವಿ ಕಾಲೇಜು ಉಪನ್ಯಾಸಕ ಬಸವರಾಜ ತಿಳಿಸಿದರು.
ಬುಧವಾರ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಕೃಷ್ಣನಲ್ಲಿ ಅಪಾರ ಸಾಹಸ ಶಕ್ತಿ ಇದ್ದು ಕಾಳಿಂಗ ಸರ್ಪದ ಉಪಟಳದಿಂದ ಜನರನ್ನು ರಕ್ಷಿಸುತ್ತಾನೆ. ಮನಸ್ಸಿನಲ್ಲಿಯೇ ಲೋಕವನ್ನು ಅವಲೋಕನ ಮಾಡಿಕೊಳ್ಳುವ ಕೃಷ್ಣ, ಸುಧಾಮನ ಕಷ್ಟಗಳನ್ನು ನಿವಾರಿಸುತ್ತಾನೆ. ಸತ್ಯಭಾಮೆಯ ಅತ್ಯಂತ ಸರಳ ಭಕ್ತಿಯನ್ನು ಮೆಚ್ಚಿ ತುಳಸಿ ದಳಕ್ಕೆ ಕೃಷ್ಣ ಪರಮಾತ್ಮ ಒಲಿಯುತ್ತಾನೆ. ಅವನ ವಿಶೇಷ ವ್ಯಕ್ತಿತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೃಷ್ಣನ ಆದರ್ಶ ಸಂದೇಶಗಳು ಉತ್ತಮ ಜೀವನಕ್ಕೆ ದಾರಿ ದೀಪವಾಗಿವೆ. ಭಗವದ್ಗೀತೆ ಮೂಲಕ ಧರ್ಮ ಪರಿಪಾಲನೆ, ಅನೈತಿಕತೆ ವಿರುದ್ಧ ಹೋರಾಟ, ಸತ್ಯ, ಪ್ರೀತಿ, ವಾತ್ಸಲ್ಯ, ಒಳ್ಳೆಯ ಜೀವನದ ಬಗ್ಗೆ ಆದರ್ಶ ಸಂದೇಶಗಳು ಸಮಾಜಕ್ಕೆ ಹಾಗೂ ವಿಶ್ವಕ್ಕೆ ಮಾದರಿಯಾಗಿವೆ. ಕೃಷ್ಣ ಯುದ್ಧ ಹಾಗೂ ಶಾಂತಿಯಲ್ಲಿ ಘನತೆ ಹಾಗೂ ಗೌರವವನ್ನು ಕಾಪಾಡಿಕೊಂಡಿದ್ದ. ಕಂಸ, ಜರಾಸಂಧ, ನರಕಾಸುರ ಹಾಗೂ ಕೌರವರ ಸಂವಹಾರಕ್ಕೆ ಕಾರಣಿಕರ್ತನು ಹಾಗೂ ಭಾರತಿಯರ ಪಾಲಿಗೆ ದೈವಿ ಸ್ವರೂಪಿಯಾಗಿದ್ದಾನೆ. ಸಜ್ಜನರ ರಕ್ಷಕ, ದುರ್ಜನರ ಸಂಹಾರಕನಾಗಿ ಜನ ಮಾನಸದಲ್ಲಿ ಉಳಿದಿದ್ದಾನೆ ಎಂದು ವಿವರಿಸಿದರು.
ತಹಸೀಲ್ದಾರ್ ಸುರೇಶ ಅಂಕಲಗಿ ಕಾರ್ಯಕ್ರಮ ಉದ್ಘಾಟಿಸಿ, ಶ್ರೀಕೃಷ್ಣನು ವಿಷ್ಣುವಿನ ಅವತಾರ. ದೈವಸ್ವರೂಪಿ, ರಾಜನೀತಿ ತಜ್ಞ, ಭಾರತೀಯರ ಪಾಲಿಗೆ ದೈವಿ ಸ್ವರೂಪಿಯಾಗಿದ್ದಾನೆ. ಕೃಷ್ಣನ ಜೀವನ, ತಾಳ್ಮೆ, ತತ್ವ ಹಾಗೂ ಆದರ್ಶಗಳು ಎಲ್ಲರಿಗೆ ದಾರಿ ದೀಪವಾಗಿವೆ ಎಂದು ಹೇಳಿದರು.