ಜಿಲ್ಲೆ

ಕೃಷ್ಣ ಜನ್ಮಾಷ್ಟಮಿ ಆಚರಣೆ

ಬಳ್ಳಾರಿ: ಇಲ್ಲಿನ ರಾಯಲ್ ಕಾಲನಿಯಲ್ಲಿನ ಶ್ರೀ ವಿಠಲ ಕೃಷ್ಣ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶ್ರೀಕೃಷ್ಣನನ್ನು ಉಯ್ಯಾಲೆಯಲ್ಲಿ ಹಾಕಿ ತೂಗುವ ಮೂಲಕ ಸುಮಂಗಲೆಯರು ಕೃಷ್ಣನಿಗೆ ಲಾಲಿ ಹಾಡನ್ನು ಹಾಡಿದರು. ಪುಟ್ಟ ಮಕ್ಕಳು ಕೃಷ್ಣನ ನಾಮ ಸ್ಮರಣೆಯ ಕೀರ್ತನೆಗಳನ್ನು ವಿವಿಧ ಹಾಡುಗಳನ್ನು ಹಾಡುವ ಮೂಲಕ ಗಮನ ಸೆಳೆದರು. ಬೆಳ್ಳಗೆಯಿಂದಲೇ ನೈರ್ಮಲ್ಯ ವಿಸರ್ಜನೆ , ಸುಪ್ರಭಾತ ನಿರ್ಮಲಾ ಅಭಿಷೇಕ ಬಳಿಕ ಕೃಷ್ಣನಿಗೆ ಆರತಿ ಬೆಳಗಿ ಸ್ವಾಗತಿಸಿ ಸೇರಿದಂತೆ ಮಹಾಭಿಷೇಕ, ಪಂಚಾಮೃತ ಅಭಿಷೇಕ
ಮಾಡಲಾಯಿತು. ತುಳಸಿ ಮಣಿಯಲ್ಲಿ
ಕೃಷ್ಣನ ಅಲಂಕಾರವನ್ನು‌ ಮಾಡಿ ಪೂಜಿಸಲಾಯಿತು. ಬಳಿಕ ಕೃಷ್ಣನ ಉತ್ಸವ ಮೂರ್ತಿಯನ್ನು ಬೀದಿಗಳಲ್ಲಿ ಪ್ರದಕ್ಷಿಣೆ ಹಾಕಲಾಯಿತು.‌ ಬೀದಿಗೆ‌ ಬಂದ ಕೃಷ್ಣನ ಉತ್ಸವ ಮೂರ್ತಿಗೆ ಭಕ್ತರು ಹಾಲು ಮೊಸರು ನೀಡಿ ಆರತಿ ಬೆಳಗಿದರು. ಈ ವೇಳೆ ಮಹಿಳೆಯರು ಮಹಿಳೆಯರು ಕೋಲಾಟದ ಜತೆಗೆ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ಸಂಭ್ರಮಿಸಿದರು. ಸಂಜೆ ಸಪ್ತಸ್ವರ ಕಲಾ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ವೆಂಕಟೇಶ, ಶೋಭಾರಾಣಿ, ಸುನಿತಾ, ಕವಿತಾ, ಮಮತ, ಹರಿಪ್ರಿಯಾ,ವೇದಾವತಿ, ವೀಣಾ, ಲಕ್ಷ್ಮೀ, ರಮಾ, ವಿಜಯಲಕ್ಷ್ಮೀ, ಪೂರ್ಣಿಮಾ ಇದ್ದರು.