ವಿಶೇಷ ವರದಿ ಬಾಗಲಕೋಟೆ:
ಜಿಲ್ಲೆಯಲ್ಲಿ ಮಳೆಯ ಅಬ್ಬರ ಇಲ್ಲ, ಮಹಾರಾಷ್ಟ್ರದಲ್ಲಿ ವರುಣಾರ್ಭಟ ನಿಲ್ಲುತ್ತಲೇ ಇಲ್ಲ. ಹೀಗಾಗಿ ಎಲ್ಲೋ ಮಳೆಯಾದರೇ ಇನ್ನೆಲ್ಲೋ ಕೊಡೆ ಹಿಡಿಯುವ ಪರಿಸ್ಥಿತಿಯಿಂದ ಜಿಲ್ಲೆಯ ಜನರು ಹೊರಬರಲಾಗದೇ ಪ್ರವಾಹದ ಸುಳಿಗೆ ಸಿಕ್ಕು ಅಕ್ರಂದಿಸುತ್ತಿದ್ದಾರೆ.
ಹೌದು, ಜಿಲ್ಲೆಯಲ್ಲಿ ಮತ್ತೆ ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಇನ್ನಿಲ್ಲದಂತೆ ಅಬ್ಬರಿಸುತ್ತಿವೆ. ಇದರಿಂದ ಜೀವಹಾನಿ ಜೊತೆ ಬೆಳೆಹಾನಿ, ಮನೆ ಹಾನಿ ಉಂಟಾಗುತ್ತಿವೆ. ಜನರು ಗಂಟೆ ಮೂಟೆ ಕಟ್ಟಿಕೊಂಡು ವಾಸ ಇದ್ದ ಮನೆಯನ್ನು ತೊರೆದು ಎಲ್ಲೆಲ್ಲೋ ಸುರಕ್ಷಿತ ಸ್ಥಳಗಳಿಗೆ ಅಲೆದಾಡುವಂತಾಗಿದೆ.
ಇತ್ತೀಚಿನ ವರ್ಷಗಳಲ್ಲಿ ನದಿ ತೀರದ ಗ್ರಾಮಗಳ ವಾಸವೇ ಜನರಿಗೆ ಭಾರವಾಗುತ್ತಿದೆ. ೨೦೧೯ರಿಂದ ಪ್ರವಾಹ ಬಿಟ್ಟು ಬಿಡದೇ ಕಾಡುತ್ತಿದೆ. ಈ ವರ್ಷ ಮತ್ತೆ ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಅಬ್ಬರ ದಿನೇ ದಿನೇ ಜಾಸ್ತಿ ಆಗುತ್ತಲೇ ಇದೆ. ಅನೇಕ ಗ್ರಾಮಗಳಲ್ಲಿ ಮನೆ ಬಾಗಿಲಿಗೆ ಈಗಾಗಲೇ ಪ್ರವಾಹದ ನೀರು ಮುತ್ತಿಕ್ಕಿ ಜನರನ್ನು ಹೊರ ಹೋಗುವಂತೆ ಮಾಡುತ್ತಿದೆ. ಸದ್ಯಕ್ಕೆ ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ ಹಾಗೂ ಮುಧೋಳ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಜನರಿಗೆ ಎಲ್ಲಿಗೆ ಪಯಣ ಯಾವುದೋ ದಾರಿ ಎಂದು ತಿಳಿಯದಾಗಿದೆ.
೨೯೪ ಕುಟುಂಬಗಳ ೧೬೯೧ ಜನರ ಸ್ಥಳಾಂತರ:
ಜು. ೨೫ ರಿಂದ ಕೃಷ್ಣಾ ಮತ್ತು ಘಟಪ್ರಭಾ ನದಿ ತೀರದ ಕೆಲ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ತಲೆದೂರುತ್ತ ಬಂದಿದೆ. ಘಟಪ್ರಭಾ ಪ್ರವಾಹ ಪೀಡಿತ ಮುಧೋಳ ತಾಲೂಕಿನ ಮಿರ್ಜಿ, ಮುಧೋಳ ನಗರದ ಕೆಲ ಪ್ರದೇಶ, ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ, ನಂದಗಾಂವ್ ಗ್ರಾಮಗಳು ಹಾಗೂ ಕೃಷ್ಣಾ ತೀರದ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ, ತಮದಡ್ಡಿ, ಅಸ್ಕಿ ಗ್ರಾಮಗಳ ಒಟ್ಟು ೨೯೪ ಕುಟುಂಬಗಳ ೧೬೯೧ ಜನರು ತೊಟ್ಟ ಬಟ್ಟೆಯಲ್ಲೆ ಗಂಟು ಮೂಟೆ ಕಟ್ಟಿಕೊಂಡು ಸುರಕ್ಷಿತ ಸ್ಥಳಕ್ಕೆ ಒಲ್ಲದ ಮನಸ್ಸಿನಲ್ಲಿ ತೆರಳಿದ್ದಾರೆ. ಈ ಪೈಕಿ ೯ ಕಾಳಜಿ ಕೇಂದ್ರಗಳಲ್ಲಿ ಒಟ್ಟು ೧೧೪೫ ಜನರು ಆಶ್ರಯ ಪಡೆದುಕೊಂಡಿದ್ದಾರೆ. ಇದಲ್ಲದೆ ಜಮಖಂಡಿ ತಾಲೂಕಿನ ತುಬುಚಿ, ಮುತ್ತೂರ, ಮೈಗೂರ ಮತ್ತಿತರ ಗ್ರಾಮಗಳ ಜನರು ಪುನರ್ ವಸತಿ ಕೇಂದ್ರಗಳು ಹಾಗೂ ಸಂಬಂಽಕರ ಮನೆಗಳಿಗೆ ತೆರಳಿದ್ದಾರೆ. ಇದಲ್ಲದೇ ೮೫೦ ಜಾನುವಾರುಗಳನ್ನು ಅಲ್ಲಿಂದ ಬೇರೆ ಕಡೆಗೆ ಹೊಡೆದುಕೊಂಡು ಹೋಗಿದ್ದಾರೆ.
ಅಪಾರ ಬೆಳೆ ನಷ್ಟಕ್ಕೆ ನಾಂದಿ :
ಪ್ರವಾಹ ಬರೀ ಜನರನ್ನು ಸ್ಥಳಾಂತರ ಮಾಡಿಲು ಕಾರಣವಾಗಿಲ್ಲ. ರೈತರು ಬೆವರು ಹರಿಸಿ ಬೆಳೆದು ಬೆಳೆಗಳನ್ನು ಅ-ÉÇÃಷನ್ ತೆಗೆದುಕೊಳ್ಳುತ್ತಿದೆ. ಸದ್ಯ ಈ ಮೂರು ತಾಲೂಕುಗಳಲ್ಲಿ ಒಟ್ಟು ೧೫೪೫೯ ಹೆಕ್ಟರ್ ಕೃಷಿ ಬೆಳೆ ಸಂಪೂರ್ಣ ಜಲಾವೃತವಾಗಿದೆ. ಮುಖ್ಯವಾಗಿ ಕಬ್ಬು, ಹೆಸರು, ಉದ್ದು, ಮೆಕ್ಕೆಜೋಳ, ತೊಗರಿ ಬೆಳೆ ಜಲಾವೃತವಾಗಿದ್ದು, ಬಹುತೇಕ ಬೆಳೆ ಹಾನಿ ಸಂಭವಿಸಿ ಮತ್ತೊಮ್ಮೆ ಬೃಹತ್ ಹಾನಿಗೆ ಪ್ರವಾಹ ಸಾಕ್ಷಿಯಾಗಲಿದೆ. ಇದರ ಜೊತೆಗೆ ೩೦೧ ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಯೂ ಜಲಾವೃತವಾಗಿದ್ದು, ಈ ಪೈಕಿ ಈರುಳ್ಳಿ ಹಾಗೂ ತರಕಾರಿ ಬೆಳೆ ಜಾಸ್ತಿ ಇದ್ದು, ನೀರು ಇಳಿದರೂ ಅದು ಕೈಗೆ ಸಿಗದಂತ ಪರಿಸ್ಥಿತಿ ಇದೆ.
೮೨ ಫೀಡರ್ ಜಲಾವೃತ :
ಕೃಷ್ಣಾ ಹಾಗೂ ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಅಪಾರ ಪ್ರಮಾಣದಲ್ಲಿ ರೈತರ ಪಂಪ್‌ಸೆಟ್ ಗಳನ್ನು ಬಂದ್ ಮಾಡಿಸಲಾಗಿದೆ. ಸೋಮವಾರ ಸಂಜೆ ವರೆಗೂ ಒಟ್ಟು ೮೨ ಫೀಡರ್ ಗಳು ಹಾಗೂ ೧೪೨೪ ವಿದ್ಯುತ್ ಪರಿವರ್ತಕಗಳು ಜಲಾವೃತವಾಗಿವೆ. ಇದರಿಂದ ಯಾವುದೇ ಅಪಾಯ ಸಂಭವಿಸದಂತೆ ತಡೆಯಲು ೧೦೭೪೫ ರೈತರ ಪಂಪ್ ಸೆಟ್ ಗಳನ್ನು ಬಂದ್ ಮಾಡಿಲಾಗಿದೆ. ಮುಖ್ಯವಾಗಿ ಜಮಖಂಡಿ ತಾಲೂಕಿನ ಕೃಷ್ಣಾ ತೀರದ ಅನೇಕ ಕಡೆಗೆ ವಿದ್ಯುತ್ ಕಂಬಗಳ ತಂತಿಗಳಲ್ಲಿ ನೀರಲ್ಲಿ ಮುಳುಗಿವೆ. ಇದರಿಂದ ವಿದ್ಯುತ್ ಸಂಪರ್ಕ ಬಂದ್ ಮಾಡಲಾಗಿದೆ. ಇದು ಪ್ರಾಥಮಿಕ ಮಾಹಿತಿಯಾಗಿದ್ದು, ನೀರು ಇಳಿದ ಬಳಿಕ ಎಷ್ಟು ಕಂಬಗಳು ಉರುಳಿ ಬಿದ್ದಿವೆ, ಎಷ್ಟು ಕಿ.ಮೀ. ವಿದ್ಯುತ್ ತಂತಿ ಹಾನಿಯಾಗಿದೆ ಎನ್ನುವುದು ಸೇರಿ ಎಷ್ಟೆಲ್ಲ ಹಾನಿ ಆಗಿದೆ ಎಂದು ಸರ್ವೆ ನಡೆಸಲಾಗುವುದು ಎಂದು ಹೆಸ್ಕಾಂ ಅಽಕಾರಿಗಳು ಹೇಳುತ್ತಾರೆ.
ಹಲವು ಗ್ರಾಮಗಳ ಸಂಪರ್ಕ ಸೇತುವೆ ಬಂದ್ :
ಎರಡು ನದಿಗಳು ಪೈಪೋಟಿಗೆ ಇಳಿದಂತೆ ಅಬ್ಬರಿಸುತ್ತಿರುವುದರಿಂದ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಹಲವು ಸೇತುವೆಗಳು ಈಗಾಗಲೇ ಜಲಾವೃತವಾಗಿವೆ. ಮುಖ್ಯವಾಗಿ ಘಟಪ್ರಭಾ ವ್ಯಾಪ್ತಿಯ ೧೨ ಸೇತುವೆಗಳು ಈಗಾಗಲೇ ಜಲಾವೃತವಾಗಿದ್ದು, ಹತ್ತಾರು ಗ್ರಾಮಗಳು ಹಾಗೂ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಧೋಳ-ಯಾದವಾಡ ಸೇತುವೆ ಜಲಾವೃತಗೊಂಡು ವಾಹನ ಮತ್ತು ಜನ ಸಂಚಾರ ಬಂದ್ ಆಗಿದೆ. ಇದರ ಜೊತೆಗೆ ಬಾಗಲಕೋಟೆ-ಮುಧೋ ನಗರಕ್ಕೆ ತೆರಳುವ ಚಿಚಖಂಡಿ ಹೆದ್ದಾರಿ ಸೇತುವೆ ಸಹ ಸೋಮವಾರ ಸಂಜೆ ವೇಳೆಗೆ ನೀರು ಹಾಯುತ್ತಿದ್ದು, ಆ ಸಂಪರ್ಕ ರಸ್ತೆಯೂ ಬಂದ್ ಆಗಲಿದೆ. ಅತ್ತ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಶ್ರಮಬಿಂದು ಸಾಗರದ ಬಳಿ ಇರುವ ಜಮಖಂಡಿ-ವಿಜಯಪುರ ಹೆದ್ದಾರಿಯ ಸೇತುವೆ ರಸ್ತೆ ಸಹ ಯಾವುದೇ ಕ್ಷಣದಲ್ಲಿ ಜಲಾವೃತವಾಗುವ ಹಂತಕ್ಕೆ ಬಂದು ನಿಂತಿದೆ. ನದಿ ತಳದಿಂದ ಅಂದಾಜು ೫೦ -ÀÇಟ್ ಎತ್ತರ ಇರುವ ಈ ಸೇತುವೆಯೂ ಇದೇ ಪ್ರಮಾಣದಲ್ಲಿ ನೀರು ಹರಿದು ಬಂದಲ್ಲಿ ಮಂಗಳವಾರ ಸಂಜೆ ಹೊತ್ತಿಗೆ ಜಲಾವೃತವಾಗುವ ಸಂಭವ ಇದೆ ಎನ್ನಲಾಗುತ್ತಿದೆ. ಇದಲ್ಲದೇ ಘಟಪ್ರಭಾ ಮತ್ತು ಕೃಷ್ಣಾ ನದಿಗಳಲ್ಲಿ ನಾಳೆಯೂ ನೀರಿನ ಮಟ್ಟ ಹೆಚ್ಚಾಗುವ ಸಂಭವ ಇರುವುದರಿಂದ ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ ಹಾಗೂ ಬೀಳಗಿ ತಾಲೂಕಿನ ಹಲವು ರಸ್ತೆಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಜಮಖಂಡಿ ಉಪವಿಭಾಗಾಽಕಾರಿ ಶ್ವೇತಾ ಬೀಡಿಕರ್ ತಿಳಿಸಿದ್ದಾರೆ.