ಚಿತ್ರದುರ್ಗ: ರಾಜ್ಯ,ರಾಷ್ಟ್ರ ರಾಜಕಾರಣದ ಎಲ್ಲ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ, ಸಮರ್ಥವಾಗಿ ನಿಭಾಯಿಸಿದ ಬೆರಳೆಣಿಕೆ ರಾಜಕಾರಣಿಗಳಲ್ಲಿ ಎಸ್.ಎಂ. ಕೃಷ್ಣ ಪ್ರಮುಖರು.ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಗತ್ತು ಕರ್ನಾಟಕದ ಕಡೆ ತಿರುಗಿ ನೋಡುವ ರೀತಿ ಐಟಿ-ಬಿಟಿ ಮೂಲಕ ಬೆಂಗಳೂರನ್ನು ಕಟ್ಟಿದ ರೀತಿ, ಜೊತೆಗೆ ಉದ್ಯೋಗ ಸೃಷ್ಟಿಗೆ ಅಗತ್ಯ ಯೋಜನೆ ರೂಪಿಸಿದ ದೂರದೃಷ್ಟಿ ರಾಜಕಾರಣಿ. ಕೃಷ್ಣ ಅತ್ಯುತ್ತಮ ಸಂಸದೀಯ ಪಟು ಆಗಿದ್ದರು. ಸಮಾಜವಾದಿ ಹಿನ್ನೆಲೆಯ ಕೃ ಷ್ಣ, ಕಾಂಗ್ರೆಸ್ ಸೇರಿ ಲೋಕಸಭೆ,ವಿಧಾನಸಭೆ ಸದಸ್ಯರಾಗಿ ಸ್ಪೀಕರ್,ಮಂತ್ರಿ,ಮುಖ್ಯಮಂತ್ರಿ, ರಾಜ್ಯಪಾಲ,ಕೇಂದ್ರ ಸಚಿವರಾಗಿ ಸೇವೆ ಸಲ್ಲಿ ಸಿದ್ದಾರೆ. ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ,ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹೀಗೆ ಅನೇಕ ಜನ ಪರ ಕಾರ‌್ಯಕ್ರಮಗಳನ್ನು ನಾಡಿಗೆ ಕೊಟ್ಟಿಂಥ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಆಂಜನೇಯ ಹೇಳಿದ್ದಾರೆ.