ಜಿಲ್ಲೆ

ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಳ್ಳಿ

ಡಂಬಳ: ಹಲವು ವರ್ಷಗಳ ಕೃಷಿ ಕ್ಷೇತ್ರದ ಅನುಭವದಿಂದ ಅವಿದ್ಯಾವಂತರು ಉತ್ತಮ ಪ್ರಗತಿಪರ ರೈತರಾಗಿ ಆರ್ಥಿಕವಾಗಿ ಸುಧಾರಣೆಯಾಗಿದ್ದಾರೆ. ವಿದ್ಯಾವಂತರು ಉದ್ಯೋಗವಿಲ್ಲದೆ ಪರದಾಡುವ ಬದಲು ತಮ್ಮಲ್ಲಿನ ಜ್ಞಾನವನ್ನು ಬಳಸಿಕೊಂಡು ಕೃಷಿ, ಹೈನುಗಾರಿಕೆ ವೃತ್ತಿಯಲ್ಲಿ ನಿರತರಾದರೆ ಉತ್ತಮ ಆದಾಯ ಪಡೆಯಬಹುದು ಎಂದು ಜಗದ್ಗುರು ತೋಂಟದ ಡಾ. ಸಿದ್ಧರಾಮ ಶ್ರೀಗಳು ಅಭಿಪ್ರಾಯಪಟ್ಟರು.

ಡಂಬಳ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ಕೃಷಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೂರಾರು ವಿದ್ಯಾವಂತ ಯುವಕರು ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಕುರಿ ಸಾಕಾಣಿಕೆಯಲ್ಲಿ ತೊಡಗಿಕೊಂಡು ಉತ್ತಮ ಆದಾಯ ಪಡೆಯುತ್ತಿದ್ದು, ಹಲವಾರು ಜನರಿಗೆ ಉದ್ಯೋಗ ನೀಡಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಸುಧಾರಿತ ತಳಿಯ ಬೀಜಗಳನ್ನು ಬಿತ್ತನೆ ಮಾಡಿ ವಿವಿಧ ಬೆಳೆ ಬೆಳೆಯಬೇಕು. ಸಾವಯವ ಕೃಷಿಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಕೃಷಿ ಅಧಿಕಾರಿ ಎಸ್.ಬಿ. ರಾಮೇನಹಳ್ಳಿ ಮಾತನಾಡಿ ಸಾವಯವ ಭಾಗ್ಯ ಯೋಜನೆ, ಆಧುನಿಕ ಕೃಷಿಯಲ್ಲಿ ಯಾಂತ್ರೀಕರಣ, ಭೂ ಚೇತನ ಯೋಜನೆ, ಕೃಷಿ ಭಾಗ್ಯ ಯೋಜನೆ, ಮಣ್ಣು ಆರೋಗ್ಯ ಅಭಿಯಾನ, ಮಣ್ಣು ಪರೀಕ್ಷಾ ಯೋಜನೆ ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಾಳ, ಜಾತ್ರಾ ಕಮಿಟಿ ಅಧ್ಯಕ್ಷ ಗವಿಸಿದ್ದಪ್ಪ ಬಿಸನಳ್ಳಿ,ವಿ.ಎಸ್. ಯರಾಶಿ, ಜಿ.ವಿ.ಹಿರೇಮಠ, ಆರ್.ಎಸ್. ಹಳೆಮನಿ, ಗೌರಿಶಂಕರ ಸಜ್ಜನ, ರಮೇಶ ಕೊರ್ಲಹಳ್ಳಿ, ಸಿದ್ದನಗೌಡರ ಜಾಯನಗೌಡರ, ವಿರುಪಾಕ್ಷಪ್ಪ ಲಕ್ಕುಂಡಿ, ದಿಯಪ್ಪ ಮೇವುಂಡಿ, ಶಿವಪ್ಪಪ್ಯಾಟಿ, ನಂಜಪ್ಪನವರ, ಎಸ್.ಬಿ.ಸೂಡಿ, ಬಸವರಾಜ ಬೇವಿನಮರದ, ಬಸವರಾಜ ಪ್ಯಾಟಿ, ಎನ್.ಬಿ. ಹೊಸಳ್ಳಿ, ಆರ್.ಎಚ್. ಹಳೇಮನಿ, .ಡಿ.ಸೊರಟೂರ, ಮಳ್ಳಪ್ಪ ವಗ್ಗರಣಿ, ರಾಯಾಸಾಬ ದೊಡ್ಡಮನಿ, ಶಂಭು ಸೇರಿ ನೂರಾರು ರೈತರು ಇದ್ದರು.

10ಡಿಬಿಎಲ್-2 ಪೋಟೋ ಶೀರ್ಷಿಕೆ: ಡಂಬಳ ಗ್ರಾಮದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕೃಷಿ ವಸ್ತು ಪ್ರದರ್ಶನಕ್ಕೆ ತೋಂಟದ ಡಾ. ಸಿದ್ಧರಾಮ ಮಹಾಸ್ವಾಮೀಜಿ ಚಾಲನೆ ನೀಡಿದರು.

ವಿಜೃಂಭಣೆಯ ರಥೋತ್ಸವ

ಡಂಬಳ: ಕೋಮು ಸೌಹಾರ್ದಕ್ಕೆ ಹೆಸರಾದ ರೊಟ್ಟಿ ಜಾತ್ರೆ ಎಂದು ಪ್ರಸಿದ್ಧಿ ಪಡೆದಿರುವ ಡಂಬಳದ ತೋಂಟದಾರ್ಯ ಮಠದ ರಥೋತ್ಸವ ಸೋಮವಾರ ಸಂಜೆ ತೋಂಟದ ಡಾ. ಸಿದ್ಧರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ, ಸಾವಿರರು ಭಕ್ತರ ಜಯಘೊಷದ ಮಧ್ಯೆ ವಿಜೃಂಭಣೆಯಿಂದ ಜರುಗಿತು.

ಡೊಳ್ಳು ಕುಣಿತ, ಕರಡಿ ಮೇಳ, ಭಜನೆ ಸೇರಿ ವಿವಿಧ ಕಲಾತಂಡಗಳು ಜಾತ್ರೆಯಲ್ಲಿ ಪಾಲ್ಗೊಂಡು ಜನರ ಗಮನ ಸೆಳೆದವು. ತೋಂಟದಾರ್ಯ ಮಠದ ಕಾರ್ಯಾದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಡಂಬಳ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ.ಹಿರೇಮಠ, ಜಾತ್ರಾ ಕಮಿಟಿ ಅಧ್ಯಕ್ಷ ಗವಿಸಿದ್ದಪ್ಪ ಬಿಸನಳ್ಳಿ, ಉಪಾಧ್ಯಕ್ಷ ಬಸವರಾಜ ಗಂಗಾವತಿ, ಬಸವಂತಪ್ಪ ಪಟ್ಟಣಶೆಟ್ಟಿ, ವಿ.ಎಸ್. ಯರಾಶಿ, ಗೋಣಿಬಸಪ್ಪ ಕೊರ್ಲಹಳ್ಳಿ, ಮರೆತಮ್ಮಪ್ಪ ಆದಮ್ಮನವರ, ಸಿದ್ದಣ್ಣ ಪಟ್ಟಣಶೆಟ್ಟಿ, ರೇವಣ್ಣಸಿದ್ದಪ್ಪ ಕರಿಗಾರ, ಬೀರಪ್ಪ ಬಂಡಿ, ಕುಬೇರಪ್ಪ ಕೊಳ್ಳಾರ, ಬಸವರಾಜ ಪೂಜಾರ, ಈಶಣ್ಣ ಶೆಟ್ಟರ್, ವಿ.ಟಿ. ಮೇಟಿ, ರುದ್ರಪ್ಪ ಕೊರ್ಲಗಟ್ಟಿ, ಕುಮಾರ ಪ್ಯಾಟಿ, ಸಿ.ಆರ್. ಹಿರೇಮಠ, ಎಸ್,ಬಿ.ಹೂಗಾರ, ಅಶೋಕ ಮಾನೆ ಇತರರಿದ್ದರು.