ಬಾಗೇಪಲ್ಲಿ : ಬೆಳೆಗೆ ಸಾವಯವ ಗೊಬ್ಬರ ಬಳಸುವುದರಿಂದ ಉತ್ತಮ ಸಲು ಬರುತ್ತದೆ ಎಂದು ಶಾಸಕ ಎಸ್.ಎನ್,ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಗ್ರ ಕೃಷಿ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಿಂದೆ ಕಾಲಕಾಲಕ್ಕೆ ತಿಪ್ಪೆ ಗೊಬ್ಬರವನ್ನು ಹೊಲಗದ್ದೆಗಳಿಗೆ ಸಾಗಿಸುತ್ತಿದ್ದರು, ಆಗ ಭೂಮಿ ಲತ್ತಾಗಿ ಬೆಳೆಯುವ ಆಹಾರ ಧಾನ್ಯಗಳಲ್ಲಿ ಎಲ್ಲ ರೀತಿಯ ಪೋಷಕಾಂಶಗಳು ಇರುತ್ತಿದ್ದವು. ಈಗ ರಾಸಾಯನಿಕ ಗೊಬ್ಬರ ಬಳಸುವುದರಿಂದ ಆಹಾರ ಧಾನ್ಯಗಳಲ್ಲಿ ವಿಷ ಸೇರಿಕೊಂಡಿದೆ. ಹೀಗಾಗಿ ಯಾವುದೇ ಬೆಳೆ ಬೆಳೆಯಬೇಕಾದರೆ ಉತ್ತಮ ೆಷಕಾಂಶ ಇರುವ ಗೊಬ್ಬರ ಅಗತ್ಯ ಎಂದರು.
ಆಧುನಿಕ ಕೃಷಿ ಪದ್ಧತಿಯಲ್ಲಿ ರಸಗೊಬ್ಬರ ಬಳಕೆ ಅತಿಯಾಗಿರುವುದರಿಂದ ಉತ್ಪಾದನಾ ವೆಚ್ಚ ಅಧಿಕವಾಗಿ ಭೂಮಿಯ ಲವತ್ತತೆ ಹಾಳಾಗಿದೆ. ಹೀಗಾಗಿ ರೈತರು ಸಾವಯವ ಗೊಬ್ಬರ ಹಾಕಿ ಭೂಮಿಯ ಆರೋಗ್ಯ ಕಾಪಾಡಬೇಕು ಎಂದು ತಿಳಿಸಿದರು.ಕೃಷಿ ಜಂಟಿ ನಿರ್ದೇಶಕಿ ಎಲ್.ರೂಪಾ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.
ಕೃಷಿ ವಿಜ್ಞಾನಿ ವಿಶ್ವನಾಥ್ ಬಿರಾದರ್ ಮಾತನಾಡಿ, ಬೆಳೆಗಳಿಗೆ ಕ್ರಿಮಿ ನಾಶಕ ಸಿಂಪಡಿಸುವ ಬದಲು ಹಂತಹಂತವಾಗಿ ಸಾವಯುವ ಔಷಧ ಬಳಸಿ ಎಂದು ಸಲಹೆ ನೀಡಿದರು.
ರೈತರಿಗೆ ಮುಸಕಿನ ಜೋಳ, ರಾಗಿ, ನೆಲಗಡಲೆ, ಭತ್ತ ಕೊಯ್ಲು ಯಂತ್ರ, ಸ್ಪಿಂಕ್ಲರ್ ಪರಿಕರ ವಿತರಿಸಲಾಯಿತು.
ಕೃಷಿ ಉಪ ನಿರ್ದೇಶಕಿ ಡಾ.ಅನುರೂಪಾ, ತಾಪಂ ಅಧ್ಯಕ್ಷ ಕೆ.ಆರ್. ನರೇಂದ್ರಬಾಬು, ಜಿಪಂ ಸದಸ್ಯ ನರಸಿಂಹಪ್ಪ, ಮುಖಂಡ ಪ್ರಭಾಕರರೆಡ್ಡಿ, ಶಿವಶಂಕರರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ದಿವ್ಯಜ್ಯೋತಿ, ಮಧುಶ್ರೀ, ಕೃಷಿ ಅಧಿಕಾರಿ ನಂದಿನಿ, ಸುನಿಲ್ ಕುಮಾರ್, ಶಂಕರಯ್ಯ, ವ್ಯವಸ್ಥಾಪಕ ಬಾಬು ಇದ್ದರು.