ಬಸವಾನಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಆರಗ ಜ್ಞಾನೇಂದ್ರ, ಟಿ.ಡಿ.ರಾಜೇಗೌಡ, ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥ ಗೌಡ, ಬಸವಾನಿ ವಿಜಯದೇವ್ ಇತರರಿದ್ದರು. 
ಜಿಲ್ಲೆ

ಕೃಷಿಕರ ಬದುಕಿಗೆ ಸಹಕಾರ ಕ್ಷೇತ್ರ ಉತ್ತೇಜನ

ತೀರ್ಥಹಳ್ಳಿ: ಗ್ರಾಮೀಣ ಬದುಕನ್ನು ಹಸನುಗೊಳಿಸಿರುವ ಸಹಕಾರ ವ್ಯವಸ್ಥೆ ಜನರ ವಿಶ್ವಾಸ ಗಳಿಸುವಲ್ಲಿಯೂ ಯಶಸ್ವಿಯಾಗಿರುವುದು ಗಮನಾರ್ಹ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಶತಮಾನೋತ್ಸವ ವರ್ಷ ಪೂರೈಸಿರುವ ಬಸವಾನಿ ಕೃಷಿ ಪತ್ತಿನ ಸಹಕಾರ ಸಂಘ ತನ್ನ 109ನೇ ವರ್ಷದ ಸವಿನೆನಪಿಗಾಗಿ ನಬಾರ್ಡ್ ನೆರವಿನೊಂದಿಗೆ 2.05 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಂಘದ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಪ್ರಮುಖವಾಗಿ ಕೃಷಿಕರ ಬದುಕನ್ನು ಗಟ್ಟಿಗೊಳಿಸುವಲ್ಲಿ ಸಹಕಾರ ಸಂಘಗಳು ಪ್ರಮುಖ ಪಾತ್ರವಹಿಸಿವೆ. ಸರ್ಕಾರದಿಂದ ನಿರ್ವಹಿಸಲಾಗದ ಬಹುತೇಕ ಕೆಲಸಗಳು ಸಹಕಾರ ವ್ಯವಸ್ಥೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದು ಗಮನಾರ್ಹ. ರೈತರ ಏಳಿಗೆಗಾಗಿ ಜಾರಿಗೆ ಬಂದಿರುವ ಉಚಿತ ವಿದ್ಯುತ್ ಯೋಜನೆ ನಂತರದಲ್ಲಿ ಕೃಷಿ ಚಟುವಟಿಕೆಗೆ ಹೆಚ್ಚಿನ ಉತ್ತೇಜನ ದೊರೆತಿದೆ ಎಂದು ಹೇಳಿದರು.

ಅತ್ಯಂತ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಈ ಭವನದ ನಿರ್ಮಾಣದಲ್ಲಿ ಟೆಂಡರ್ ಮೊತ್ತದಲ್ಲಿ 41ಲಕ್ಷ ರೂ. ಉಳಿತಾಯವಾಗಿರುವುದು ಸಾಮಾನ್ಯ ಸಾಧನೆಯಲ್ಲ. ಸಾರ್ವಜನಿಕ ಸಂಘ ಸಂಸ್ಥೆಗಳಿಗೆ ಇದು ಮಾದರಿ. ಕಟ್ಟಡದ ಕಾಮಗಾರಿಯೂ ಅತ್ಯಂತ ಗುಣಮಟ್ಟದಿಂದ ಕೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವ್ಯಾಪಾರ ಮಳಿಗೆ ಉದ್ಘಾಟಿಸಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಮಹಾತ್ಮ ಗಾಂ ಅವರ ಕನಸು. ಸ್ವಾತಂತ್ರಾನಂತರ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅದಕ್ಕೆ ಚಾಲನೆ ನೀಡಿದ್ದರು. ಸಹಕಾರ ಕ್ಷೇತ್ರದ ಬೆಳವಣಿಗೆಯಿಂದಾಗಿ ದೇಶದ ಹಲವಾರು ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತಿದೆ ಎಂದರು.

ಸಭಾಭವನ ಉದ್ಘಾಟಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ವ್ಯಕ್ತಿ ಮತ್ತು ವಿಶ್ವಾಸರ್ಹತೆ ಆಧಾರದಲ್ಲಿ ನಡೆಯುತ್ತಿರುವ ಸಹಕಾರಿ ಕ್ಷೇತ್ರದ ಮೇಲೆ ಸರ್ಕಾರ ಮೀಸಲಾತಿ ಹೇರಿಕೆ ಮಾಡುವ ಮೂಲಕ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ತೀರ್ಥಹಳ್ಳಿ ತಾಲೂಕಿನ ಸಹಕಾರ ಸಂಘಗಳಿಗೆ 388 ಕೋಟಿ ರೂ. ಸಾಲ ನೀಡಿದ್ದೇವೆ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಊಟದ ಹಾಲ್ ಉದ್ಘಾಟಿಸಿದರು. ಸಂಘದ ನಿರ್ದೇಶಕ ಬಸವಾನಿ ವಿಜಯದೇವ್, ಅಪರ ಜಿಲ್ಲಾಕಾರಿ ವಿ.ಅಭಿಷೇಕ್, ತಹಸೀಲ್ದಾರ್ ಎಸ್.ರಂಜಿತ್, ಸಂಘದ ಅಧ್ಯಕ್ಷ ಬಿ.ಎನ್.ಸುರೇಶ್, ಭಾಸ್ಕರ ಭಟ್, ಡಾ. ಚಂದನಾ, ನಾಗರಾಜ ಭಟ್, ರವಿ ಕುಪ್ಪಳಿ, ರಮೇಶ್, ಸಿಇಒ ಎಚ್.ಎಂ.ಸಂದೀಪ್ ಇದ್ದರು.