ಜಿಲ್ಲೆ

ಕೃಷಿಕ ಸಮಾಜಕ್ಕೆ ಸಿದ್ರಾಮಯ್ಯ ಸ್ವಾಮಿಗೆ ಆಯ್ಕೆ

ಬೀದರ್: ಕೃಷಿಕ ಸಮಾಜದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಸಿದ್ರಾಮಯ್ಯ ಸ್ವಾಮಿ ಅವರನ್ನು ಅನುಭವ ಮಂಟಪ ನ್ಯೂಟ್ರೇಷನ್ ಕ್ಲಬ್ ವತಿಯಿಂದ ನಗರದ ಬಸವ ಮುಕ್ತಿ ಮಂದಿರದಲ್ಲಿ ಸನ್ಮಾನಿಸಲಾಯಿತು.
ಕ್ಲಬ್ ಪದಾಧಿಕಾರಿಗಳು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಹೂಮಾಲೆ ಹಾಕಿ ಗೌರವಿಸಿದರು.
ಕೃಷಿಕ ಸಮಾಜದ ಎಲ್ಲ ಸೌಲಭ್ಯಗಳನ್ನು ಜಿಲ್ಲೆಯ ರೈತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಸಿದ್ರಾಮಯ್ಯ ಸ್ವಾಮಿ ಹೇಳಿದರು.
ಸಿದ್ರಾಮಯ್ಯ ಸ್ವಾಮಿ ಅವರು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ರೈತರ ಬಗ್ಗೆ ಅಪಾರ ಕಳಕಳಿ ಹೊಂದಿದ್ದಾರೆ. ಅವರು ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿಯಾಗಿದೆ ಎಂದು ಕ್ಲಬ್‍ನ ವಕ್ತಾರ ಮಹಾಲಿಂಗ ಸ್ವಾಮಿ ಚಟ್ನಳ್ಳಿ ನುಡಿದರು.
ಕ್ಲಬ್ ಅಧ್ಯಕ್ಷ ಆಕಾಶ ಪಾಟೀಲ ಚಿಮಕೋಡ್, ಉದ್ಯಮಿಗಳಾದ ಮಂಜುನಾಥ ಬಾಗೋಡಿ, ಶರಣಯ್ಯ ಸ್ವಾಮಿ, ವಿಶ್ವನಾಥ ಕೋಟೆ, ಜ್ಯೋತಿ ಯಲಗೊಡ, ಶಶಿ ಶೆಟಕಾರ್ ಮೊದಲಾದವರು ಇದ್ದರು.