ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕರ ದಾರುಣ ಸಾವು
ಚಿಕ್ಕೋಡಿ(ಮಾಂಜರಿ) : ಕೃಷಿಹೊಂಡದಲ್ಲಿ ಬಿದ್ದು ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವಿಗಿಡಾಗಿರುವ ಘಟನೆ
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಇಂಗಳಿ ಗ್ರಾಮದ ವಿದ್ಯಾರ್ಥಿಯಾದ ಪೃಥ್ವಿರಾಜ ಅಭಿಜಿತ್ ಕೆರಬಾ( 13), ಅಥರ್ವ ಸುಧೀರ್ ಸೌಂದಲಗೆ(15), ಸಮರ್ಥ ಚೌಗುಲೆ ಉರ್ಪ ಗಡಕರಿ (13), ಸಾವಿಗಿಡಾದ ವಿದ್ಯಾರ್ಥಿಗಳು.
ಶಾಲೆ ರಜೆ ಇದ್ದ ಹಿನ್ನೆಲೆ ,ಗ್ರಾಮದ ಹೊರವಲಯದಲ್ಲಿದ್ದ ರೈತರ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದರು.ಈಜು ಬಾರದೆ ಮೂವರು ನೀರಿನಲ್ಲಿ ಮುಳುಗಿ ಸಾವಿಗಿಡಾಗಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕೋಡಿಯ ತಹಸಿಲ್ದಾರ್ ಚಿದಂಬರ ಕುಲಕರ್ಣಿ ಅಂಕಲಿ ಪೊಲೀಸ್ ಠಾಣೆಯ ಪಿಎಸ್ಐ ನಂದೀಶ್ ಇವರು ಬೆಟ್ಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.