ಜಿಲ್ಲೆ

ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವು

ಚಿಟಗುಪ್ಪ: ಕೊಡಂಬಲ್ ಗ್ರಾಮದಲ್ಲಿ ಬಾಲಕನೊಬ್ಬ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ. ಗ್ರಾಮದ ಪ್ರಕಾಶ ರಾಜು ವಾಡೇಕರ್ (15) ಈತನು ಹೊಲದಲ್ಲಿದ್ದ ತಂದೆಗೆ ಮಧ್ಯಾಹ್ನ ಊಟ ಕೊಟ್ಟು ಹಿಂತಿರುಗುವಾಗ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳಗಿ ಸಾವಿಗೀಡಾಗಿದ್ದಾನೆ. ಶನಿವಾರ ಬೆಳಗ್ಗಿನ ಜಾವ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಸಿಪಿಐ ಅಮೂಲ ಕಾಳೆ, ಪಿಎಸ್ಐ ಮಹೇಂದ್ರಕುಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿಟಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.