ಜಿಲ್ಲೆ

ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಸಾವು

ಚಿಕ್ಕನಾಯಕನಹಳ್ಳಿ:- ಈಜಾಡಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಮೃತಪಟ್ಟಿದ್ದಾನೆ. ತಾಲೂಕಿನ ಶೆಟ್ಟಿಕೆರೆ ಹೋಬಳಿಯ ತಮ್ಮಡಿಹಳ್ಳಿಯ ಪ್ರೀತಮ್​ (13) ಮೃತ ಬಾಲಕ. ಬುಧವಾರ ಮಧ್ಯಾಹ್ನ 3-.30ರ ಸಮಯದಲ್ಲಿ ಕೃಷಿ ಹೊಂಡದಲ್ಲಿ ಈಜಾಡಲು ಹೋಗಿದ್ದ. ಈಜುಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಹಂದಿನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಸಾವು

ತುಮಕೂರು: ನಗರದ ಸರ್ಕಾರಿ ಆಸ್ಪತ್ರೆ ಆವರಣ ಟ್ರಾಮಾಕೇರ್​ ಸೆಂಟರ್​ ಬಳಿ ಅಸ್ವಸ್ಥನಾಗಿ ಬಿದ್ದಿದ್ದ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಏ.4ರಂದು ಮೃತಪಟ್ಟಿರುತ್ತಾನೆ. ಈತನ ವಾರಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ. ಮೃತನು 175 ಸೆಂ.ಮೀ. ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಈತನ ಮೈಮೇಲೆ ಆಕಾಶ ನೀಲಿ ಹಾಗೂ ಹಳದಿ ನೀಲಿ ಮಿಶ್ರಿತ ಟೀ ಷರ್ಟ್​ ಹಾಗೂ ಸಿಮೆಂಟ್​ ಬಣ್ಣದ ಪ್ಯಾಂಟ್​ ಇರುತ್ತದೆ. ವಾರಸುದಾರರು ಯಾರಾದರೂ ಇದ್ದಲ್ಲಿ ದೂ.0816- 2278388, ಮೊ.9480802945-, 00-30 ಸಂಪರ್ಕಿಸಿ.