ಜಿಲ್ಲೆ

ಕೃಷಿ ಭಾಗ್ಯ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ರವಿಕುಮಾರ್ ಪಿ. ಕೆ

ಹೊಳೆನರಸೀಪುರ: ಸರ್ಕಾರದ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯ ಬಯಸುವ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. 1. ಕ್ಷೇತ್ರ ಬದು, 2. ಕೃಷಿ ಹೊಂಡ, 3. ನೀರು ಇಂಗದಂತೆ ಪಾಲಿಥಿನ್ ಹೊದಿಕೆ, 4. ತಂತಿ ಬೇಲಿ, 5. ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪ್‌ಸೆಟ್, ಸೋಲಾರ್ ಪಂಪ್‌ಸೆಟ್, 6. ನೀರನ್ನು ಹಾಯಿಸಲು ತುಂತರು/ಹನಿನೀರಾವರಿ ಘಟಕಗಳು ಸೇರಿದಂತೆ ಮೇಲ್ಕಾಣಿಸಿದ ಎಲ್ಲ 6 ಘಟಕಗಳನ್ನು ಅಳವಡಿಸಿಕೊಂಡು ಫಲಾನುಭವಿ ರೈತರು ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ಸಲಹೆ ನೀಡಿದ್ದಾರೆ. ಈ ಯೋಜನೆಗಳಲ್ಲಿ ಸಾಮಾನ್ಯವರ್ಗಕ್ಕೆ ಶೇ 80, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ. 90 ಸಹಾಯಧನ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಕೆ.ಎಚ್.ಸಪ್ನಾ ತಿಳಿಸಿದ್ದಾರೆ.