ಜಿಲ್ಲೆ

ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಗುಂಡ್ಲುಪೇಟೆ: ತಾಲೂಕಿನ ಗೋಪಾಲಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಎಲ್ಲ 11 ಸದಸ್ಯರೂ ಬಿಜೆಪಿ ಬೆಂಬಲಿತರೇ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಜಿ.ಪಿ.ಗವಿಯಪ್ಪ, ಉಪಾಧ್ಯಕ್ಷರಾಗಿ ಜಿ.ಪಿ.ರಾಜೇಶ್, ನಿರ್ದೇಶಕರಾಗಿ ಡಿ.ಮಾದಪ್ಪ, ಜಿ.ಡಿ.ಶಂಕರ್, ಜಿ.ಎಂ.ಶಿವಕುಮಾರ್, ಜಿ.ಗೋಪಾಲಪ್ಪ, ಜಿ.ಎಸ್.ಮಾದಪ್ಪ, ಮಹದೇವಾಚಾರಿ, ಬಸವಯ್ಯ, ರತ್ನಮ್ಮ, ಅಂಬಿಕಾ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಹಕಾರ ಇಲಾಖೆಯ ಪದ್ಮಾನಂದ ಪ್ರಕಟಿಸಿದರು.

ಕಣ್ಣೇಗಾಲ ಶಕ್ತಿ ಕೇಂದ್ರದ ಅಧ್ಯಕ್ಷ ಜಿ.ಆರ್.ಪ್ರಭುಸ್ವಾಮಿ, ಮುಖಂಡ ಡಿ.ಮಾದಪ್ಪ, ಜಿ.ಜಿ.ಮಲ್ಲಿಕಾರ್ಜುನ ಸೇರಿದಂತೆ ಗ್ರಾಮಸ್ಥರು ಇತರರಿದ್ದರು.