ಜಿಲ್ಲೆ

ಕೃಷಿ ಪತ್ತಿನ ಸಂಘಕ್ಕೆ ಡಿ.ಸಿ.ಬಾಬು ಉಪಾಧ್ಯಕ್ಷ

ಯಳಂದೂರು: ತಾಲೂಕು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಡಿ.ಸಿ. ಬಾಬು ಅವಿರೋಧವಾಗಿ ಆಯ್ಕೆಯಾದರು.


ಪಟ್ಟಣದ ಬಳೇಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅನಿಲ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಡಿ.ಸಿ. ಬಾಬು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಎಸ್.ಸುಭಾಷಿಣಿ ಅವಿರೋಧವಾಗಿ ಆಯ್ಕೆ ಘೋಷಿಸಿದರು.


ನೂತನ ಉಪಾಧ್ಯಕ್ಷ ಡಿ.ಸಿ. ಬಾಬು ಮಾತನಾಡಿ, ಈ ಸಹಕಾರ ಸಂಘವು ತಾಲೂಕಿನ ಹಳೆಯ ಸಂಘಗಳಲ್ಲಿ ಒಂದಾಗಿದೆ. ಇಲ್ಲಿನ ಸದಸ್ಯರಿಗೆ ಸರ್ಕಾರದಿಂದ ದೊರಕುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವ ಹಾಗೂ ಸಂಘವನ್ನು ಲಾಭದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಸಂಘದ ನಿರ್ದೇಶಕರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ನಿರ್ದೇಶಕರಾದ ಪಿ.ಮಾದೇಶ್, ವೈ.ಎಸ್. ನಂಜಶೆಟ್ಟಿ, ನಿಂಗರಾಜು, ರವಿ, ಜಯರಾಮು, ರಾಜಮ್ಮ, ವೈ.ಬಿ. ಮಹೇಶ್, ರಾಜಶೇಖರ, ಪುಟ್ಟಚಾಮಮ್ಮ, ಸಂಘದ ಕಾರ್ಯದರ್ಶಿ ಪುಟ್ಟರಾಜು, ಸಿಬ್ಬಂದಿಯಾದ ಟಿ.ಪಿ. ರವಿ, ವೈ.ಎಂ. ರಂಗನಾಥ, ಮುಖಂಡರಾದ ಬಂಗಾರು, ಗಣಿಗನೂರು ಪ್ರಸಾದ್, ಮಹದೇವಶೆಟ್ಟಿ, ಮೇಲೇಗೌಡ, ಶಾಂತರಾಜು, ಸೋಮಣ್ಣ, ಮಲ್ಲು, ದೊರೆಸ್ವಾಮಿ ಇತರರು ಇದ್ದರು.