ಚಿಕ್ಕಮಗಳೂರು: ಭಾರತೀಯ ಸಂಸ್ಕೃತಿ ಜಾನಪದ ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳು. ಕೃಷಿ ಮತ್ತು ಜಾನಪದಕ್ಕೆ ಬಿಡಿಸಲಾರದ ಅವಿನಾಭಾವ ಸಂಬAಧವಿದೆ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವಂತೆ ಜಾನಪದ ಕಲೆ ಸಾಹಿತ್ಯ ಸಂಗೀತಗಳ ತಳಹದಿ ಮೇಲೆ ಉಳಿದೆಲ್ಲಾ ಸಾಹಿತ್ಯ ಸಂಗೀತಗಳ ಪ್ರಕಾರಗಳು ಬೆಳೆದು ನಿಂತು ಕಂಗೊಳಿಸುತ್ತಿವೆ ಎಂದು ಹಾಸನ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಂಪನಲ್ಲಿ ತಿಮ್ಮೇಗೌಡ ಅಭಿಪ್ರಾಯಪಟ್ಟರು.
ಬೇಲೂರು ತಾಲೂಕಿನ ಗೆಂಡೆಹಳ್ಳಿಯಲ್ಲಿ ಕರ್ನಾಟಕ ಜಾನಪದ ಪರಿಷತ್ ಚಿಕ್ಕಮಗಳೂರು ಘಟಕದಿಂದ ಆಯೋಜಿಸಿದ್ದ ಜಾನಪದ ಕಲಾ ಸಂಭ್ರಮ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕ ಯುವತಿಯರು ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗದೆ ನಮ್ಮ ಮೂಲ ಸಂಸ್ಕೃತಿ ಜನಪದದ ಕಡೆಗೆ ಆಕರ್ಷಿತರಾಗಿ ಸ್ವಸ್ಥ ಸಮಾಜವನ್ನು ಹುಟ್ಟು ಹಾಕಬೇಕಿದೆ ಎಂದು ಕರೆನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ಎಲ್ಲ ಸಾಹಿತ್ಯಗಳ ಮೂಲ ಬೇರು ಜಾನಪದವೇ ಆಗಿದೆ. ಜಾನಪದ ಸಂಸ್ಕೃತಿ ಸಾಹಿತ್ಯ ಸಂಗೀತಕ್ಕೆ ಮಹಿಳೆಯರ ಕೊಡುಗೆ ಅಮೋಘವಾದದ್ದು. ಜಾನಪದ ವಿದ್ವಾಂಸರ ಸಾಹಿತ್ಯವನ್ನು ಓದಿದಾಗ ಕುಟುಂಬ ಮತ್ತು ಸಮಾಜಕ್ಕೆ ಅವಳ ತ್ಯಾಗ ಬಲಿದಾನ ಬೆಳಕಿಗೆ ಬರುತ್ತವೆ. ಇಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ತಾಂತ್ರಿಕ, ಅಭಿವೃದ್ಧಿಗೆ ಅವಳ ಪಾತ್ರ ಬಹಳ ಪ್ರಮುಖವಾಗಿದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಜಾನಪದವೆಂದರೆ ಬರಿ ಹಾಡಲ್ಲ. ಇದರಲ್ಲಿ ೨೫೦ಕ್ಕೂ ಹೆಚ್ಚು ಕಲಾ ಪ್ರಕಾರಗಳಿವೆ. ಇವೆಲ್ಲವೂ ಮನುಷ್ಯನಿಗೆ ನಾಗರಿಕತೆಯ ಪಾಠ ಹೇಳಿಕೊಡುತ್ತವೆ ಹಾಗೂ ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರೇರೇಪಣೆ ನೀಡುತ್ತವೆ. ಹಾಗಾಗಿ ಜಾನಪದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಅತ್ಯಮೂಲ್ಯವಾಗಿದೆ. ಆದ್ದರಿಂದ ಪ್ರತಿಯೊಂದು ಕುಟುಂಬದ ಸದಸ್ಯರು ತಮ್ಮ ಮುಂದಿನ ಪೀಳಿಗೆಯವರಿಗೆ ಜಾನಪದ ಸಂಗೀತ, ಕಲೆ ಸಾಹಿತ್ಯ ವನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಲು ಕಿವಿ ಮಾತನ್ನು ಹೇಳಬೇಕು ಎಂದು ವಿನಂತಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸಿz್ದೆÃಗೌಡ ಮಾತನಾಡಿ, ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾನಪದ ಸಾಹಿತ್ಯ ಕಲೆಗೆ ಸಂಬAಧಪಟ್ಟ ಕಾರ್ಯಗಾರವನ್ನು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಂದೀಪ, ಆಕಾಶವಾಣಿ ಕೇಂದ್ರದ ಡಾ. ವಿಜಯ ಅಂಗಡಿ, ಶಾರದಾದೇವಿ ಕಲಾಸಂಘದ ಎ.ಎಂ.ಪರಮೇಶ್, ಪ್ರಮುಖರಾದ ದೇವಾನಂದ ಪ್ರಸಾದ್, ಕೆಂಚೇಗೌಡ, ಭಾರತಿ, ರತನ್, ವೆಂಕಟೇಶ್, ಜಿ.ಆರ್. ಶಾಂತಗೌಡ, ಕೆ.ಎನ್.ನವನೀತ್ ಮತ್ತಿತರರಿದ್ದರು.