ಜಿಲ್ಲೆ

ಕೃಷಿ ಕಾಯ್ದೆ ವಿರೋಧಿಸಿ ರೈಲ್ ರೋಕೋ ಚಳುವಳಿ; ಪ್ರತಿಭಟನಾಕಾರರ ಬಂಧನ- ಬಿಡುಗಡೆ

ವಿಜಯಪುರ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈಲು ತಡೆಯಲು ಯತ್ನಿಸಿದ ಪ್ರತಿಭಟನಾಕಾರರನ್ನು ವಿಜಯಪುರ ರೈಲು ನಿಲ್ದಾಣದಲ್ಲಿ ಬಂಧಿಸಿ ಬಿಡುಗಡೆ ಮಾಡಲಾಯಿತು.

ಗುರುವಾರ ಬೆಳಗ್ಗೆ ರೈಲು ನಿಲ್ದಾಣಕ್ಕೆ‌ ನುಗ್ಗಿ ಬಸವ ಎಕ್ಸ್‌ಪ್ರೆಸ್‌ ರೈಲು ತಡೆಯಲು ಯತ್ನಿಸಿದ ರೈತರು ಸೇರಿದಂತೆ ವಿವಿಧ ಸಂಘಟನೆಯು ಕಾರ್ಯಕರ್ತರನ್ನು ಗೋಳಗುಮ್ಮಟ ಪೊಲೀಸರು ಬಂಧಿಸಿದರು. ಇನ್ನು ಕೃಷಿ ಕಾಯ್ದೆ ಹಾಗೂ ಖಾಸಗೀಕರಣ ವಿರೋಧಿಸಿ ನಿಲ್ದಾಣಕ್ಕೆ ಪ್ರತಿಭಟನಾಕಾರರು ನುಗ್ಗಲು ಯತ್ನಿಸಿದ ವೇಳೆ ಪೊಲೀಸರ ನಡುವೆ ತಳ್ಳಾಟ ನೂಕಾಟ ಕೂಡಾ ನಡೆಯಿತು.