ಧಾರವಾಡ: ಮಹಾತ್ಮ ಗಾಂಧಿ ಪುಣ್ಯತಿಥಿ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷಾತೀತ ರೈತ ಹಿತರಕ್ಷಣಾ ಪರಿವಾರ ಹಾಗೂ ಕರ್ನಾಟಕ ರೈತ ಸೇನೆ, ರೈತ- ಕೃಷಿ ಕಾರ್ವಿುಕರ ಸಂಘಟನೆ (ಆರ್ಕೆಎಸ್) ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತ್ಯೇಕ ಧರಣಿ, ಉಪವಾಸ ಸತ್ಯಾಗ್ರಹ ನಡೆಸಿದರು.
ಪಕ್ಷಾತೀತ ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್. ನೀರಲಕೇರಿ ನೇತೃತ್ವದಲ್ಲಿ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಪಿ.ಎಚ್. ನೀರಲಕೇರಿ ಮಾತನಾಡಿ, ದೆಹಲಿಯಲ್ಲಿ ಧರಣಿ ನಿರತ ರೈತರೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ. ಅನ್ನ ನೀಡುವ ರೈತರಿಗೆ ಮೊದಲು ಗೌರವ ಕೊಡುವುದನ್ನು ಕಲಿಯಬೇಕು. ಪ್ರಧಾನಿ ಮೋದಿ ಅವರು ರೈತ ವಿರೋಧಿ ಕಾನೂನನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ಶರಣಪ್ಪ ಕೊಟಗಿ, ಎ.ಎಂ. ಖಾನ್, ಬಿ.ಎನ್. ಪೂಜಾರ, ಶ್ರೀಶೈಲ ಗೌಡ ಕಮತರ, ಬಸವರಾಜ ಮಲಕಾರಿ, ಎಚ್.ಎಂ. ರಾಜು, ಮಂಜುನಾಥ ಭೋವಿ, ಫಿರೋಜ್ಖಾನ್ ಹವಾಲ್ದಾರ್, ಎನ್.ಕೆ. ಕಾಗಿನೆಲೆ, ಶಿವಾನಂದ ಹಾದಿಮನಿ, ಇದ್ದರು.
ರೈತ ಸಂಘಟನೆಗಳ ಒಕ್ಕೂಟ: ವಿವಿಧ ರೈತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಮಾತನಾಡಿ, ಕೇಂದ್ರ ಸರ್ಕಾರ ರೈತರ ಹೋರಾಟವನ್ನು ದಮನ ಮಾಡುತ್ತಿದೆ. ಇದರ ವಿರುದ್ಧ ದೇಶಾದ್ಯಂತ ಹೋರಾಟ ಭುಗಿಲೇಳುತ್ತಿದೆ. ಜನಸಾಮಾನ್ಯರು ರೈತಪರ ಹೋರಾಟವನ್ನು ಬೆಂಬಲಿಸಬೇಕು ಎಂದರು.
ಆರ್ಕೆಎಸ್ ಜಿಲ್ಲಾಧ್ಯಕ್ಷ ಲಕ್ಷ್ಮ್ಮ ಜಡಗಣ್ಣನವರ, ಕಾರ್ಯದರ್ಶಿ ಶರಣು ಗೋನವಾರ, ರೈತ ಸಂಘದ ಜಿಲ್ಲಾಧ್ಯಕ್ಷರಾದ ಕಲ್ಮೇಶ ಲಿಗಾಡೆ, ಕಾರ್ಯದರ್ಶಿ ಚಂದ್ರಪ್ಪ ಕಬ್ಬೂರ, ಡಾ. ವೆಂಕನಗೌಡ ಪಾಟೀಲ, ಮಹಾದಾಯಿ ಹೋರಾಟ ಸಮಿತಿಯ ಲಕ್ಷ್ಮಣ ಬಕ್ಕಾಯಿ, ಸಲೀಂ ಸಂಗನಮುಲ್ಲಾ, ಶರೀಫ ಅಮ್ಮಿನಬಾವಿ, ಫಕ್ಕೀರಪ್ಪ ಕೋಟಿ, ಇತರರಿದ್ದರು.
ಹೋರಾಟಕ್ಕೆ ಬೆಂಬಲ: ದೆಹಲಿ ರೈತರ ಹೋರಾಟ ಬೆಂಬಲಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲಾಯಿತು. ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ ಮಾತನಾಡಿ, ಪೆಟ್ರೋಲ್, ಡೀಸೆಲ್, ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ತಡೆಯಲು ಕೇಂದ್ರ ಸರ್ಕಾರ ವಿಫಲವಾಗಿದೆ. ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಹೋರಾಟ ಹತ್ತಿಕ್ಕುತ್ತಿರುವುದು ಸರಿಯಲ್ಲ ಎಂದರು. ಅಲ್ತಾಫ್ ಹಳ್ಳೂರ, ಆನಂದ ಜಾಧವ, ರಘು ಲಕ್ಕಣ್ಣವರ, ಶರಣಪ್ಪ ಕೊಟಗಿ, ಸದಾನಂದ ಡಂಗನವರ, ಗೌರಿ ನಾಡಗೌಡ, ಸುರೇಖಾ ಮೇಧಾ, ನಾಗರಾಜ ಗುರಿಕಾರ, ಹೇಮಂತ ಗುರ್ಲಹೊಸೂರ, ಆನಂದ ಮೂಶಣ್ಣವರ, ನವೀದ ಮುಲ್ಲಾ, ವಸಂತ ಅರ್ಕಾಚಾರಿ, ಆನಂದ ಸಿಂಗನಾಥ, ಜಯಂತ ಸಾಗರ, ಸುಮಿತ್ರಾ ಕೋಟಕರ, ಕುಸುಮಾ ಜೈನ, ರಿಯಾಜ್ ನನ್ನೆಸಾಬನವರ, ಇತರರಿದ್ದರು.