ಜಿಲ್ಲೆ

ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಿ : ಸರ್ಕಾರಕ್ಕೆ ಎಂಎಲ್ಸಿ ಅನಿಲ್​ಕುಮಾರ್​ ಒತ್ತಾಯ

ಕೋಲಾರ: ಕೃಷಿ ಉತ್ಪನ್ನಗಳಿಗೆ ಸರ್ಕಾರ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸದಿದ್ದರೆ ಕೃಷಿ ಕ್ಷೇತ್ರದ ಉಳಿವು ಕಷ್ಟಕರವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ರ್ನಿಲಕ್ಷ$್ಯ ಮುಂದುವರಿದರೆ ಹೋರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿಮಾರ್ಣವಾಗುತ್ತದೆ ಎಂದು ವಿಧಾನಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ಕುಮಾರ್​ ತಿಳಿಸಿದರು. ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಕರ್ನಾಟಕ ರೈತ ಜಾಗೃತಿ ವೇದಿಕೆ, ಇಫ್ಕೋ ಸಂಸ್ಥೆಯಿಂದ ಬುಧವಾರ ಆಯೋಜಿಸಿದ್ದ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ರೈತರಿಗೆ ಕಿಟ್​ಗಳ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕರೊನಾ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸಿಗದ ಪರಿಣಾಮ ಬೀದಿಗೆ ಬಿಸಾಕಲಾಯಿತು. ರೈತರ ನೆರವಿಗೆ ಬರಬೇಕಾದ ಸರ್ಕಾರ ರ್ನಿಲಕ್ಷಿಸಿದ್ದು ಸಮಂಜಸವಲ್ಲ. ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೂ ಸರ್ಕಾರಗಳು ಸಮಸ್ಯೆಗಳನ್ನು ಬಗೆಹರಿಸುವ ಗೋಜಿಗೆ ಹೋಗುವುದಿಲ್ಲ. ದೇಶ ಕಾಯುವ ಸೈನಿಕರಂತೆಯೇ ಎಲ್ಲರಿಗೂ ಅನ್ನ ಕೊಡುವ ಅನ್ನದಾತರು ಮುಖ್ಯ ಎಂಬುದನ್ನು ಆಳುವವರು ಅರ್ಥ ಮಾಡಿಕೊಳ್ಳಬೇಕು ಎಂದರು. ಸರ್ಕಾರವು ಇತರ ವಸ್ತುಗಳಿಗೆ ಬೆಲೆ ನಿಗದಿಪಡಿಸುವಂತೆ ಕೃಷಿ ಉತ್ಪನ್ನಗಳಿಗೂ ಬೆಲೆ ನಿಗದಿ ಪಡಿಸಬೇಕು. ಹೀಗಾದರೆ ಸಮಾನತೆ ಕಾಪಾಡಿದಂತಾಗುತ್ತದೆ. ನಿತ್ಯ ಬಳಕೆ ವಸ್ತುಗಳ ಬೆಲೆ ನಿತ್ಯ ಏರಿಕೆ ಮಾಡುತ್ತಿರುವಾಗ ಹಾಲಿನ ದರ ಏರಿಕೆ ಮಾಡಲು ಮೀನಮೇಷ ಎಣಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು. ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಜಿಲ್ಲೆಯಲ್ಲಿ 188 ಅಧಿಕಾರಿಗಳು ಇದ್ದರೂ ಯಾವ ಅಧಿಕಾರಿಯೂ ಹೊಲ ತೋಟಗಳಿಗೆ ಭೇಟಿ ನೀಡುವುದಿಲ್ಲ. ಕೃಷಿ ಯಂತ್ರೋಪಕರಣಗಳಿಗೆ ನೀಡುವ ಸಬ್ಸಿಡಿಗಳಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣಲು ಸಾಧ್ಯವಾಗಿಲ್ಲ. ಸರ್ಕಾರವು 1025 ಕೋಟಿ ರೂಪಾಯಿ ಸಬ್ಸಿಡಿ ನೀಡಿದರೂ ಉಪಯೋಗವಾಗುತ್ತಿಲ್ಲ ಎಂದರು. ಬಿತ್ತನೆ ಬೀಜ ಸಂಸ್ಥೆಗಳಿಂದ ರೈತರಿಗೆ ವಂಚನೆಯಾಗುತ್ತಿದೆ. ಕಳಪೆ ಬಿತ್ತನೆ ಜತೆಗೆ ಕಮಿಷನ್​ ದಂಧೆಯಾಗಿ ಮಾರ್ಪಟ್ಟಿದೆ. ರಾಸಾಯನಿಕಗಳ ಅವೈಜ್ಞಾನಿಕ ಬಳಕೆಯಿಂದ ದುಷ್ಪರಿಣಾಮ ಹೆಚ್ಚಾಗುತ್ತಿದೆ. ಕೀಟನಾಶಕಗಳು ಗುಣಮಟ್ಟ ಕಳೆದುಕೊಂಡಿವೆ. ಈ ಹಿಂದೆ ಬೇವು, ಹೊಂಗೆ ಮುಂತಾದ ಗೊಬ್ಬರಗಳನ್ನು ಬಳಸುತ್ತಿದ್ದರಿಂದ ಮಣ್ಣು ಸತ್ವಯುತವಾಗಿರುತ್ತಿತ್ತು. ಆದರೆ ಅಧುನಿಕತೆಯಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದರು. ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​, ಇ್ಕೋ ರಾಜ್ಯ ಮಾರುಕಟ್ಟೆ ವ್ಯವಸ್ಥಾಪಕ ಡಾ.ಸಿ.ನಾರಾಯಣಸ್ವಾಮಿ, ರೈತ ಜಾಗೃತಿ ವೇದಿಕೆ ತಿರುಮಲಹಟ್ಟಿ ದೇವರಾಜ್​, ಕೆ.ವಿ.ರೆಡ್ಡಿ ಇತರರು ಇದ್ದರು.

ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮಂಜೂರು ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ನೀಲಗಿರಿಯನ್ನು ನಿಮೂರ್ಲನೆ ಮಾಡುವಲ್ಲಿ ವಿಫಲವಾಗಿರುವುದರಿಂದ ಖಾಸಗಿ ವ್ಯಕ್ತಿಗಳಿಗೆ ನೀಲಗಿರಿ ಬೆಳೆಯಬೇಡಿ ಎನ್ನಲು ನಮಗೆ ನೈತಿಕತೆ ಇರುವುದಿಲ್ಲ. ಕೆರೆಗಳ ಅಂಗಳದಲ್ಲಿ ಜಾಲಿ ಗಿಡಗಳಿಂದ ಕೆರೆಗಳಲ್ಲಿನ ನೀರು ಶೀಘ್ರ ಖಾಲಿಯಾಗುತ್ತದೆ. ರೈತರು ಎಚ್ಚೆತ್ತುಕೊಂಡು ಹೋರಾಟ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ಅನಿಲ್​ಕುಮಾರ್​, ಎಂಎಲ್ಸಿ