ವಿಜಯವಾಣಿ ಸುದ್ದಿಜಾಲ ಧಾರವಾಡ
ಒಬ್ಬ ಗುರುವಿಗೆ ನಿಜವಾದ ಸಂಪತ್ತು ಆತನ ವಿದ್ಯಾಥಿರ್ಗಳ ಹಾರೈಕೆಗಳು ಎಂದು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಪಾಟೀಲ ಅಭಿಪ್ರಾಯಪಟ್ಟರು.
ನಗರದ ಕೃಷಿ ವಿಶ್ವ ವಿದ್ಯಾಲಯದ ಪ್ರಥಮ ಕುಲಪತಿ ಡಾ. ಜೆ.ವಿ. ಗೌಡ ಜನ್ಮದಿನ ನಿಮಿತ್ತ ಡಾ.ಜಿಗೆನಹಳ್ಳಿ ವಿರುಪನಗೌಡರ ಅಭಿನಂದನಾ ಸಮಿತಿ ವತಿಯಿಂದ ಕೃವಿವಿ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಗೌರವ ಸಮರ್ಪಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃವಿವಿ ಅಭಿವೃದ್ಧಿಗೆ ಕಾರಣರಾದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ಅನೇಕರ ಉಪನ್ಯಾಸ ಮಾಲಿಕೆ ಆಯೋಜಿಸುವ ಯೋಜನೆ ಇದೆ. ಡಾ.ಜೆ.ವಿ.ಗೌಡ ಕೃವಿವಿ ಕುಲಪತಿ ಆಗಿದ್ದಾಗ 562 ಶಿಕ ಮತ್ತು ಶಿಕೇತರ ಸಿಬ್ಬಂದಿ ನೇಮಕಾತಿ ಮಾಡಿ ಇತಿಹಾಸ ನಿಮಿರ್ಸಿದ್ದರು. ಅವರ ಕೊಡುಗೆ ಅಪಾರ. ಡಾ.ಜೆ.ವಿ.ಗೌಡರ ಹೆಸರಿನಲ್ಲಿ ಕೃಷಿ ಬಿಎಸ್ಸಿ ಮತ್ತು ಎಂಎಸ್ಸಿ ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾಥಿರ್ಗಳಿಗೆ ಸ್ವರ್ಣ ಪದಕ ನೀಡಲಾಗುವುದು ಎಂದು ಘೋಷಿಸಿದರು.
ಕೃವಿವಿ ವಿಶ್ರಾಂತ ಕುಲಪತಿ ಪ್ರೊ. ಎಸ್.ಎ. ಪಾಟೀಲ ಮಾತನಾಡಿ, ಜೆ.ವಿ.ಗೌಡ ಅತ್ಯುತ್ತಮ ಕೃಷಿ ಸಂಶೋಧಕರು. ಹತ್ತಿ ಮತ್ತು ಅನೇಕ ಬೆಳೆಗಳ ವಿವಿಧ ತಳಿಗಳನ್ನು ಪರಿಚಯಿಸಿದ ಕೀತಿರ್ ಅವರಿಗೆ ಸಲ್ಲುತ್ತದೆ. ಅವರ ಅಪಾರ ಶಿಷ್ಯಂದಿರಲ್ಲಿ 8 ಜನರು ಕುಲಪತಿ ಆಗಿರುವುದು ವಿಶೇಷ ಎಂದರು.
ಡಾ.ಜೆ.ವಿ.ಗೌಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಒಬ್ಬ ಶಿಕನಿಗೆ ನಿಜವಾದ ಆಸ್ತಿ, ಸಂಪತ್ತು ಅವನ ಶಿಷ್ಯಬಳಗ. ನನ್ನ ಅನೇಕ ಶಿಷ್ಯಂದಿರು ಕುಲಪತಿ, ಉನ್ನತ ಹುದ್ದೆ ಅಲಂಕರಿಸಿರುವುದು ಹೆಮ್ಮೆಯ ಸಂಗತಿ. ಕೃವಿವಿಯಿಂದ ಗೌರವ ಸಲ್ಲಿಸುತ್ತಿರುವುದಕ್ಕೆ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು.
ಡಾ.ಜೆ.ವಿ.ಗೌಡ ಜೀವನ ಕುರಿತು ಡಾ. ಐ.ಎಸ್. ಕಟಗೇರಿ ಮಾತನಾಡಿದರು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಎಸ್.ಆರ್ ಭಟ್, ಡಾ. ವಿರಕ್ತಮಠ, ಡಾ. ಸದಾನಂದ, ಡಾ.ಜೆ.ವಿ ಗೌಡ ಶಿಷ್ಯ ವೃಂದ, ಕೃವಿವಿ ವಿಶ್ರಾಂತ ಕುಲಪತಿಗಳು, ಪ್ರಾಧ್ಯಾಪಕರು, ಕುಟುಂಬಸ್ಥರು, ಇತರರು ಇದ್ದರು.
ಡಾ. ಸುರೇಖಾ ಸಂಕನಗೌಡರ ನಿರೂಪಿಸಿದರು. ಡಾ.ಎಸ್.ಎಂ. ಮುಂದಿನಮನಿ ವಂದಿಸಿದರು.