ಜಿಲ್ಲೆ

ಕೂಸಿನ ಮನೆ ತರಬೇತಿ ಕೇಂದ್ರ ಪರಿಶೀಲಿಸಿದ ಜಿಪಂ ಸಿಇಒ

ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಮೋನಾ ರೋತ್ ಬುಧವಾರ ನಗರ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿರುವ ಕೂಸಿನ ಮನೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕೂಸಿನ ಮನೆಯಲ್ಲಿ ಆರೈಕೆದಾರರಾಗಿ (ಕೇರ್ ಟೇಕರ್ಸ್) ಕಾರ್ಯನಿರ್ವಹಿಸಲು ಆಯ್ಕೆಯಾಗಿರುವವರಿಗೆ ನೀಡಲಾಗುತ್ತಿರುವ ತರಬೇತಿಯನ್ನು ವೀಕ್ಷಿಸಿದರು. ಕೂಸಿನ ಮನೆಯಲ್ಲಿ ನಿರ್ವಹಣೆ ಮಾಡಬೇಕಿರುವ ಕರ್ತವ್ಯಗಳ ಬಗ್ಗೆ ವಿವರಿಸಿದರು. ತರಬೇತಿ ಅವಧಿಯಲ್ಲಿ ನೀಡಲಾಗುವ ವಿಷಯಗಳನ್ನು ಮನದಟ್ಟು ಮಾಡಿಕೊಂಡು ಕಾರ್ಯಕ್ಷೇತ್ರದಲ್ಲಿ ಸಮರ್ಪಕವಾಗಿ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ತರಬೇತಿ ಚಟುವಟಿಕೆಗಳ ಸದುಪಯೋಗ ಮಾಡಿಕೊಂಡು ಯಶಸ್ವಿಯಾಗಿ ವಹಿಸಲಾದ ಕಾರ್ಯಗಳನ್ನು ಪೂರೈಸಬೇಕು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಪ್ರಕಾಶ್ ಕುಮಾರ್, ಸಹಾಯಕ ಲೆಕ್ಕಾಧಿಕಾರಿ ಪ್ರಭುಸ್ವಾಮಿ, ತರಬೇತಿಯ ಮಾಸ್ಟರ್ ಟ್ರೈನರ್ ಹಾಗೂ ಅಂಗನವಾಡಿ ಮೇಲ್ವಿಚಾರಕ ಕಲಾವತಿ, ಲಕ್ಷ್ಮೀ ಇನ್ನಿತರರು ಈ ಸಂದರ್ಭದಲ್ಲಿ ಇದ್ದರು.