ಬಸವಕಲ್ಯಾಣದಲ್ಲಿ ಕಾಯಕ ಬಂಧು ತರಬೇತಿ ಪೂರ್ಣಗೊಳಿಸಿದ ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ತಾಪಂ ಇಒ ರಮೇಶ ಸುಲ್ಫಿ, ತಾಪಂ ಎಡಿ ಸಂತೋಷ ಚವ್ಹಾಣ್, ಸಂಜು ನಂದಿ, ನಾಗರಾಜ ಶೀಲವಂತ, ವೀರಾರೆಡ್ಡಿ, ಅಮರಾಪಲ್ಲಿ, ಚಾಮಲಾ, ನಟರಾಜ, ಲಕ್ಷ್ಮೀ ಇದ್ದರು. 
ಜಿಲ್ಲೆ

ಕೂಲಿಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ

ಬಸವಕಲ್ಯಾಣ: ಕಾಯಕ ಬಂಧು ತರಬೇತಿ ಪಡೆದ ಎಲ್ಲರೂ ನರೇಗಾ ಕೂಲಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ ಹೇಳಿದರು.

ತಾಪಂನಲ್ಲಿ ಕಾಯಕ ಬಂಧು ತರಬೇತಿ ಪೂರ್ಣಗೊಳಿಸಿದ ಮೂರನೇ ಹಾಗೂ ನಾಲ್ಕನೇ ಬ್ಯಾಚಿನ ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ನರೇಗಾ ಕೂಲಿ ಕಾರ್ಮಿಕರಿಗೆ ಗ್ರಾಮೀಣ ಮಟ್ಟದಲ್ಲಿ ನರೇಗಾ ಉದ್ದೇಶ ಮತ್ತು ತಾಂತ್ರಿಕವಾಗಿ ನಿಮ್ಮಿಂದ ಸಹಾಯವಾಗಲಿ ಎನ್ನುವ ಉದ್ದೇಶದಿಂದ ತರಬೇತಿ ನೀಡಲಾಗಿದೆ ಎಂದರು.

ತರಬೇತಿಯಲ್ಲಿ ನೀಡಿದ ವಿಷಯಗಳನ್ನು ಪಾಲಿಸುವ ಮೂಲಕ ಮಾದರಿ ಮೇಟ್ ಆಗಿ ಹೊರ ಹೊಮ್ಮಬೇಕು. ಕೆಲಸ ನಡೆಯುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಇರುವ ಸೌಲಭ್ಯಗಳ ತಿಳಿಸಬೇಕು ಎಂದು ಹೇಳಿದರು.

ತಾಪಂ ಸಹಾಯಕ ನಿದೇರ್ಶಕ ಸಂತೋಷ ಚವ್ಹಾಣ್ ಮಾತನಾಡಿ, ತರಬೇತಿ ಪಡೆದ ಮೇಟ್‌ಗಳು ಚೆನ್ನಾಗಿ ಕೆಲಸ ಮಾಡಿ ಜನರು ವಲಸೆ ಹೋಗದಂತೆ ನೋಡಿಕೊಳ್ಳಬೇಕು ಎಂದರು.

ಸಂಯೋಜಕ ಸಂಜು ನಂದಿ, ತರಬೇತಿಯ ರಾಜ್ಯ ಸಂಪನ್ಮೂಲ ವ್ಯಕ್ತಿ ನಾಗರಾಜ ಶೀಲವಂತ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ವೀರಾರೆಡ್ಡಿ, ಅಮರಾಪಲ್ಲಿ, ಚಾಮಲಾ, ನಟರಾಜ, ಲಕ್ಷ್ಮೀ ಇದ್ದರು.