ಮುಂಡಗೋಡ: ಕರೊನಾ ವೈರಸ್ ರೋಗದ ಕಾರಣದಿಂದಾಗಿ ಕೂಲಿಕಾರರಿಗೆ ಆಗುವ ಸಮಸ್ಯೆ ಪರಿಹರಿಸುವಂತೆ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಭೀಮಣ್ಣ ಭೋವಿ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗೆ ಶನಿವಾರ ಮನವಿ ಸಲ್ಲಿಸಿದರು.
ಕರೊನಾ ವೈರಸ್ ಭೀತಿಯಿಂದಾಗಿ ಕೂಲಿಕಾರರು ಕೂಲಿಗೆ ಹೋಗಬಾರದೆಂದು ಸರ್ಕಾರ ಆದೇಶ ಹೊರಡಿಸಿರುವುದರಿಂದ ನಿತ್ಯ ಕೂಲಿ ಮಾಡಿ ಜೀವನ ನಡೆಸುವ ಕೂಲಿಕಾರರಿಗೆ ತೀವ್ರ ತೊಂದರೆಯಾಗಿದೆ. ಎಲ್ಲಿಯೂ ಕೂಲಿ ಕೆಲಸ ಕೊಡದ ಕಾರಣದಿಂದಾಗಿ ಆಹಾರ ಸಮಸ್ಯೆ ಎದುರಾಗಿದೆ. ಕೂಲಿ ಮಾಡುವ ಕುಟುಂಬಗಳಿಗೆ ಆಹಾರ ಸೌಲಭ್ಯ ನೀಡಬೇಕು. ಅಡುಗೆ ಮಾಡಲು ಕಟ್ಟಿಗೆ ಇಲ್ಲದಿರುವ ಕಾರಣ ಮತ್ತು ಸಿಲಿಂಡರ್ ದರವೂ ಅಧಿಕವಾಗಿರುವುದರಿಂದ ಬಡ ಕೂಲಿಕಾರರಿಗೆ ಸಿಲಿಂಡರ್ ಕೊಳ್ಳಲು ಆಗದಿರುವ ಕಾರಣ ಉಚಿತವಾಗಿ ಸಿಲಿಂಡರ್ ಪೂರೈಸುವ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಭೀಮಣ್ಣ ಭೋವಿ, ಹನುಮಂತಪ್ಪ ಭೋವಿ, ರವಿ ಲಕ್ಕೊಳ್ಳಿ, ರಾಣಿ ತೆವರ, ದಸ್ತಗೀರ ಮಳಗಿ, ಈರಣ್ಣ ಕಟ್ಟಿಮನಿ, ಪಾರವ್ವ ಗದಗ, ಬಸವರಾಜ ಧಾರವಾಡ ಇತರರಿದ್ದರು.