ಜಿಲ್ಲೆ

ಕೂದಲೆಳೆ ಅಂತರದಲ್ಲಿ ಪಾರಾದ ಮಕ್ಕಳು


ಯಾದಗಿರಿ: ತಾಲೂಕಿನ ಮರಕಲ್ ಗ್ರಾಮದಲ್ಲಿನ ಅಂಗನವಾಡಿ ಕಟ್ಟಡದ ಛಾವಣಿ ಕುಸಿದಿದ್ದು, ಕೇಂದ್ರದಲ್ಲಿದ್ದ ಮಕ್ಕಳಿ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಗುರುವಾರ ನಡೆದಿದೆ.
ಗ್ರಾಮದಲ್ಲಿ ಎಂದಿನಂತೆ ಗುರುವಾರ ಬೆಳಿಗ್ಗೆ ಸಹ ಅಂಗನವಾಡಿ ಕೇಂದ್ರ ಆರಂಭಗೊಂಡಿತ್ತು. ಕಾರ್ಯಕತರ್ೆಯರು ಮಿಷನ್ ಇಂದ್ರಧನುಷ್ ಚುಚ್ಚುಮದ್ದು ನೀಡಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದರು. ಅಲ್ಲದೆ, ಒಳಗೆ ಮಕ್ಕಳು ಸಹ ಆಟವಾಡುತ್ತಿದ್ದರು. ಈ ವೇಳೆ ಇದ್ದಕ್ಕಿಂದ್ದಂತೆ ಮೇಲ್ಛಾವಣಿಯಿಂದ ಕಲ್ಲಿನಂತಿದ್ದ ಸಿಮೆಂಟ್ನ ಪದರುಗಳು ಕೆಳಗಡೆ ಬೀಳಲಾರಂಭಿಸಿವೆ. ತಕ್ಷಣ ಕಾರ್ಯಕತರ್ೆಯರು ಮಕ್ಕಳನ್ನು ಹೊರಗೆ ಕಳಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.

ಗ್ರಾಮದಲ್ಲಿ ಕೆಲವೇ ವರ್ಷಗಳ ಹಿಂದಷ್ಟೇ ಭೂಸೇನಾ ನಿಗಮದಿಂದ ಅಂಗನವಾಡಿ ಕೇಂದ್ರದ ಕಟ್ಟಡ ನಿಮರ್ಿಸಲಾಗಿತ್ತು. ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಕಟ್ಟಡ ಎರಡ್ಮೂರು ವರ್ಷಗಳಲ್ಲೇ ಶಿಥಿಲಾವಸ್ಥೆಗೆ ತಲುಪಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಕೂಡಲೇ ಜಿಲ್ಲಾಡಳಿತ ಗಮನ ಹರಿಸಿ, ತಪ್ಪಿತಸ್ಥ ಅಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಯಾದಗಿರಿ ಡಿಸಿ ಕಚೇರಿ ಮುಂದೆ ಹೋರಾಟ ನಡೆಸಬೇಕಾಗುತ್ತದೆ ಎಂದು ಜನತೆ ಎಚ್ಚರಿಕೆ ನೀಡಿದ್ದಾರೆ.