ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಮುದಕಣ್ಣ ಅಂಬಿಗೇರ, ಜಯಪ್ರಕಾಶ ಉತ್ತೂರ, ಕಾಮೇಶ ಭೋವಿ, ಹನಮಂತ ದೋಣಿ, ಪರಮಾನಂದ ಕಟರೊಟ್ಟಿ, ಗುರುನಾಥ ಮ್ಯಾಗೇರಿ ಇದ್ದರು. 
ಜಿಲ್ಲೆ

ಕೂಡಲೇ ಸಚಿವ ತಿಮ್ಮಾಪುರ ಅವರಿಗೆ ಕ್ಷಮೆಯಾಚಿಸಿ

ಬಾಗಲಕೋಟೆ: ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮೇಲೆ ನಿರಾಧಾರವಾಗಿ ಆರೋಪ ಮಾಡಿರುವ ಲಿಕ್ಕರ್ ಅಸೋಸಿಯೇಷನ್ ಅಧ್ಯಕ್ಷರು ಬೇಷರತ್ ಸಚಿವರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ ಎಚ್ಚರಿಕೆ ನೀಡಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಆಧಾರವಿಲ್ಲದೇ ಸಚಿವ ತಿಮ್ಮಾಪುರ ಅವರ ಏಳಿಗೆ ಸಹಿಸಲಾಗದೇ ಈ ರೀತಿ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಪ್ರಮುಖ ನಾಯಕರಾಗಿರುವ ತಿಮ್ಮಾಪುರ ಅವರ ವಿರುದ್ಧದ ಪಿತುರಿಯನ್ನು ನಾವು ಸಹಿಸುವುದಿಲ್ಲ ಎಂದರು.

ಲಿಕ್ಕರ್ ಅಸೋಸಿಯೇಷನ್ ವತಿಯಿಂದ ನ.೨೦ ರಂದು ಹಮ್ಮಿಕೊಂಡಿರುವ ಹೋರಾಟವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಅಸೋಸಿಯೇಷನ್ ಅಧ್ಯಕ್ಷರ ಮನೆ ಎದುರು ಹಾಗೂ ಅವರ ಸಂಘಟನೆ ಎದುರು ಮತ್ತು ರಾಜ್ಯದ ಪ್ರತಿಯೊಂದು ಬಾರ್‌ಗಳ ಎದುರು ನಾವು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಮುದಕಣ್ಣ ಅಂಬಿಗೇರ, ಜಯಪ್ರಕಾಶ ಉತ್ತೂರ, ಕಾಮೇಶ ಭೋವಿ, ಹನಮಂತ ದೋಣಿ, ಪರಮಾನಂದ ಕಟರೊಟ್ಟಿ, ಗುರುನಾಥ ಮ್ಯಾಗೇರಿ ಇದ್ದರು.