ಬಾಗಲಕೋಟೆ: ಕೂಡಲಸಂಗಮ ಕ್ಷೇತ್ರದಲ್ಲಿ ಇರುವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಽಪತಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿದೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಶ್ರೀಗಳು ಚಿಕಿತ್ಸೆ ಮುಂದುವರೆದಿದ್ದು, ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದು, ಯಾವುದೇ ಅಪಾಯ ಇಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಕೂಡಲಸಂಗಮ ಪೀಠದಲ್ಲಿ ಇರುವ ಶ್ರೀಗಳಿಗೆ ಶುಕ್ರವಾರ ರಾತ್ರಿ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಆಗಿತ್ತು. ಶನಿವಾರ ಬೆಳಗ್ಗೆ ಶ್ರೀಗಳಿಗೆ ತಲೆನೋವು, ವಾಂತಿ ಹಾಗೂ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಭಕ್ತರು ಬಾಗಲಕೋಟೆ ಕೆರೂಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಕಾರಿನಿಂದ ಇಳಿದ ಶ್ರೀಗಳು ನಡೆದುಕೊಂಡೇ ಚಿಕಿತ್ಸಾ ಘಟಕ್ಕೆ ತೆರಳಿದರು. ಅಲ್ಲಿ ತಜ್ಞವೈದ್ಯರು ತಕ್ಷಣವೇ ಚಿಕಿತ್ಸೆ ಆರಂಭಿಸಿದರು. ಸ್ವಾಮೀಜಿ ಆರೋಗ್ಯದಲ್ಲಿ ತೊಂದರೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ವಿವಿಧೆಡೆಯಿಂದ ಶ್ರೀಗಳನ್ನು ಭೇಟಿ ಮಾಡಲು ಭಕ್ತರು ಆಸ್ಪತ್ರೆಗೆ ಆಗಮಿಸಲು ಆರಂಭಿಸಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ಭಕ್ತರನ್ನು ವಾರ್ಡ್ಗೆ ಬಿಟ್ಟಿಲ್ಲ. ಹೀಗಾಗಿ ಆಸ್ಪತ್ರೆ ಆವರಣದಲ್ಲಿ ಉಳಿದು ಆಗಾಗ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನ ಮಾಡುತ್ತಿದ್ದರು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟ್ ಹಾಗೂ ಪೀಠಾಽಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡುವಿನ ಭಿನ್ನಮತ ತಾರಕಕ್ಕೆ ಹೋಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಮಠಕ್ಕೆ ಗೇಟ್ ಅಳವಡಿಸಿ, ಕೀಲಿ ಹಾಕಿಸಲಾಗಿತ್ತು. ಪರಿಸ್ಥಿತಿ ತಾರಕಕ್ಕೆ ಹೋಗುತ್ತದೆ ಎನ್ನುವಾಗಲೇ ಶ್ರೀಗಳು ಮಠಕ್ಕೆ ವಾಪಸ್ಸಾಗಿದ್ದರು. ಇದಕ್ಕೂ ಒಂದು ದಿನ ಮೊದಲೇ ಮಠಕ್ಕೆ ಹಾಕಿದ್ದ ಬೀಗವನ್ನು ಅಕ್ರಮವಾಗಿ ಮುರಿದಿದ್ದಾರೆ ಎಂದು ಟ್ರಸ್ಟ್ ಸ್ವಾಮೀಜಿ ಪರವಾಗಿದ್ದ ಏಳು ಜನ ಭಕ್ತರ ವಿರುದ್ಧ ಹುನಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಘಟನೆಯಿಂದ ತಮಗೆ ಸಾಕಷ್ಟು ನೋವಾಗಿದೆ ಎಂದು ಶ್ರೀಗಳು ಹೇಳಿದ್ದರು.
ಶ್ರೀಗಳು ಮಠಕ್ಕೆ ಆಗಮಿಸಿದ ಬಳಿಕ ಅವರ ಪ್ರತಿಯೊಂದು ಚಲನ ವಲನ ವೀಕ್ಷಿಸಲು ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅವರ ಕಡೆಯುವರು ಎನ್ನಲಾದ ವ್ಯಕ್ತಿಗಳು ಮಠದ ಸುತ್ತಮುತ್ತ ಇರತೊಡಗಿದರು. ಮಠಕ್ಕೆ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಯಿತು. ಮಠಕ್ಕೆ ಪೊಲೀಸ್ ಕಾವಲು ಶುರುವಾಯಿತು. ಶ್ರೀಗಳು ವಾಯು ವಿವಾರಕ್ಕೆ ಹೋದರೂ ಅವರಿಗೆ ಕಾಣದಂತೆ ಅವರ ಹಿಂದಿAದೆ ಕಣ್ಣಿಡುÀತ್ತಿದ್ದರಂತೆ. ಶ್ರೀಗಳು ಭಕ್ತರ ಮನೆಗೆ ಹೋದರೂ ಸಹ ಆ ಭಕ್ತರಿಂದ ಶ್ರೀಗಳು ಯಾಕೆ ಬಂದಿದ್ದರು ಎನ್ನುವ ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದರAತೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಶ್ರೀಗಳು ಒತ್ತಡಕ್ಕೆ ಸಿಲುಕಿದಂತೆ ಕಾಣಿಸುತ್ತಿದ್ದರು. ಇದು ಸಹ ಶ್ರೀಗಳ ಆರೋಗ್ಯ ಏರುಪೇರಾಗಲು ಕಾರಣ ಇರಬಹುದು ಎಂದು ಹೆಸರು ಹೇಳಲು ಇಚ್ಛಿಸದ ಸ್ವಾಮೀಜಿ ಪರವಾಗಿ ಇರುವ ಮಠದ ಭಕ್ತರೊಬ್ಬರು ಹೇಳುತ್ತಾರೆ.
ಇನ್ನು ಶ್ರೀಗಳು ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದು ವಿವಿಧೆಡೆಯಿಂದ ಬಂದಿದ್ದ ಭಕ್ತರು ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಕೊಪ್ಪಳ ಜಿಲ್ಲಾ ಕುಕನೂರ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಈರಣ್ಣ ಅಣ್ಣಿಗೇರಿ, ಸಮಾಜದ ಶ್ರೀಗಳಿಗೆ ಕಿರಿಕಿರಿ ಮಾಡುತ್ತಿರುವುದು ವಿರೋಽಸಿ ಹುನಗುಂದ ಶಾಸಕ, ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.
ಕಾಶಪ್ಪನವರ ಎಚ್ಚೆತ್ತುಕೊಳ್ಳಬೇಕು. ಅವರಿಗೆ ಅಽಕಾರ ಇರುವುದು ಇನ್ನು ಮೂರು ವರ್ಷವಷ್ಟೆ, ಅಽಕಾರ ಹೋದ ಮೇಲೆ ಅವರನ್ನು ಯಾರೂ ಮೂಸು ನೋಡುವುದಿಲ್ಲ. ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ತಮ್ಮ ಹೇಳಿಕೆ ವಾಪಸ್ಸು ಪಡೆದು ಸ್ವಾಮೀಜಿ ಬಳಿ ಬಂದ ಕ್ಷಮೆ ಕೋರಬೇಕು. ಕ್ಷಮೆ ಕೇಳದೇ ಇದ್ದರೆ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಹೇಳಿದರು.