ಜಿಲ್ಲೆ

ಕೂಡಲ ಸಂಗಮ ಶಿಕ್ಷಣ ಸಂಸ್ಥೆಯಲ್ಲಿ ಅಕ್ರಮವಿಲ್ಲ

ಕಲಬುರಗಿ: ಕೂಡಲ ಸಂಗಮ ಶಿಕ್ಷಣ ಸಂಸ್ಥೆಯಲ್ಲಿ ೧೫ ಕೋಟಿ ರೂ. ಅವ್ಯವಹಾರ ಮಾಡಿz್ದೆÃನೆ ಎಂದು ಆಧಾರ ರಹಿತ ಆರೋಪ ಮಾಡಿದ ಶಿವಶಂಕರ ಭುಜಂಗ ಹಾಗೂ ದಾಖಲೆಗಳಿಲ್ಲದೆ ಸಾರ್ವಜನಿಕವಾಗಿ ಇದಕ್ಕೆ ಬೆಂಬಲ ನೀಡಿದ ವಕೀಲರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಸಂಸ್ಥೆ ಹಂಗಾಮಿ ಅಧ್ಯಕ್ಷ ಆರ್.ಜಿ.ಶೆಟಗಾರ್ ಹೇಳಿದರು.

ಹಿಂದೆ ಕಂದಾಯ ಇಲಾಖೆಯಲ್ಲಿದ್ದ ಶಿವಶಂಕರ ಭುಜಂಗ ಸದ್ಯ ಸಾಮಾನ್ಯ ಸದಸ್ಯರಾಗಿದ್ದಾರೆ. ಸಂಸ್ಥೆಯ ವರ್ಷದ ಖರ್ಚು ವೆಚ್ಚ ೬೭ ಲಕ್ಷ ರೂ. ಇದೆ. ಆದರೆ ೧೫ ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಆಧಾರರಹಿತ ಹೇಳಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

೨೦೨೪ರ ಅ.೧೯ರಂದು ನನ್ನ ಮೂರು ವರ್ಷದ ಅವಧಿ ಮುಕ್ತಾಯವಾಗಿದ್ದು, ಇದೀಗ ಹಂಗಾಮಿಯಾಗಿz್ದÉÃನೆ. ನನ್ನ ಅಧಿಕಾರವಧಿಯ ಏಪ್ರಿಲ್‌ನಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗಿತ್ತು. ಸಹಿ ಮಾಡದೆ ಸದಸ್ಯರು ವಾಪಾಸ್ ಹೋಗಿದ್ದರಿಂದ ಸಭೆ ನಡೆದಿರಲಿಲ್ಲ. ಆ ವೇಳೆ ಭುಜಂಗ ಬೇರೆಡೆ ಸಭೆ ನಡೆಸಿ ಮತ್ತೊಂದು ಆಡಳಿತ ಮಂಡಳಿ ರಚಿಸಿ, ಸಹಕಾರಿ ಉಪ ನಿಬಂಧಕರಿಗೆ ನೀಡಿದ್ದಾರೆ. ಇದು ಅನಧಿಕೃತ ಎಂದು ಅಧಿಕಾರಿಗಳು ಹೇಳಿದರೂ ಕೂಡ ಜಿದ್ದು ಸಾಧಿಸಲು ಸಹಕಾರಿ ಉಪ ನಿಬಂಧಕರ ಕಚೇರಿ ಎದುರು ಪ್ರತಿಭಟಿಸುತ್ತಿದ್ದಾರೆ. ಸಂಸ್ಥೆಯ ಯಾವ ನೌಕರರಿಗೂ ಸಂಬಳ ನಿಂತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸಂಸ್ಥೆ ಹೆಸರಿನಲ್ಲಿ ಕೃಷಿ ಭೂಮಿ ಖರೀದಿಗೆ ಸಾಧ್ಯವಿಲ್ಲದಕ್ಕೆ ನನ್ನ ಹೆಸರಿನಲ್ಲಿ ಖರೀದಿಸಲಾಗಿದೆ. ಸಂಸ್ಥೆಯಲ್ಲಿ ಹಣ ಇಲ್ಲದಕ್ಕೆ ಎನ್‌ಎ ಮಾಡಿಸಿಲ್ಲ. ಆ ಜಮೀನಿನಲ್ಲಿಯೇ ಸಂಸ್ಥೆಯ ಶಾಲೆ ನಡೆಯುತ್ತಿವೆ. ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದ್ದು, ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.

ಸುಳ್ಳು ಆರೋಪ ಮಾಡಿದ ಗೌರವಕ್ಕೆ ಚ್ಯುತಿ ತಂದ ಶಿವಶಂಕರ ಭುಜಂಗ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದರು. ಸಂಸ್ಥೆ ಕಾರ್ಯದರ್ಶಿ ವಿಜಯಕುಮಾರ ಪಾಟೀಲ್, ಸದಸ್ಯ ಕಾಶಿನಾಥ ಗಂಧಿಗುಡೆ ಇದ್ದರು.